ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ನಿನ್ನೆ ಸಂಜೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದಂತ ಅನುಭವ ಜನರಿಗೆ ಉಂಟಾಗಿದೆ. ಹೀಗಾಗಿ ಮನೆಯಿಂದ ಹೊರ ಓಡಿ ಬಂದಂತ ಜನರು ಬಯಲಿನಲ್ಲಿಯೇ ಕೆಲ ಕಾಲ ಆತಂಕದಲ್ಲಿ ಕಳೆಯುವಂತೆ ಆಗಿದೆ.
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ ಇಂದು ಉಂಟಾಗಿದೆ. ನಿನ್ನೆ ಸಂಜೆ 5.45ರ ಹಾಗೆ ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದೆ. ಗೋಳಗುಮ್ಮಟ, ಕೀರ್ತಿನಗರ, ಜಲನಗರ, ತೊರವಿ, ಗಣೇಶ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದಂತ ಅನುಭವ ಉಂಟಾಗಿರೋದಾಗಿ ತಿಳಿದು ಬಂದಿದೆ.
ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಕಾರಣ, ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಅಲ್ಲದೇ ಕೆಲ ಕಾಲ ಮನೆಯ ಹೊರಗಡೆ ಆತಂಕದಲ್ಲಿ ಕಾಲ ಕಳೆದಿರೋದಾಗಿ ಹೇಳಲಾಗುತ್ತಿದೆ.