ವಿಜಯಪುರ: ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತ ಯಾತ್ರೆ

ವಿಜಯಪುರ: ಶಿಕ್ಷಕರ ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಭಾರತ ಯಾತ್ರೆ ಆರಂಭ ಆಗಿದೆ ಎಂದು ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ್ ಗುರಿಕಾರ ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 5ರಂದು ಕನ್ಯಾಕುಮಾರಿಯಿಂದ ಭಾರತ ಯಾತ್ರೆ ಆರಂಭವಾಗಿದ್ದು, ಕನ್ಯಾಕುಮಾರಿ, ಕೇರಳ, ತಮಿಳುನಾಡು, ಕರ್ನಾಟಕ ಮಾರ್ಗವಾಗಿ ದೆಹಲಿಯ ತಲುಪಲಿದೆ. ಅಕ್ಟೋಬರ್ 5ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಶಿಕ್ಷಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.

ಇನ್ನು ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಬೇಕು. ಅಲ್ಲದೇ, ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ನಾಲ್ಕು ತಂಡದಿಂದ ವಿವಿಧ ಭಾಗದಿಂದ ಭಾರತ ಯಾತ್ರೆ ಏಕಕಾಲಕ್ಕೆ ಆರಂಭಿಸಲಾಗಿದೆ. ಹಳೆ ಪಿಂಚಣಿ ಯೋಜನೆಯನ್ನು ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯದಲ್ಲಿ ಯೋಜನೆ ಜಾರಿಗೆ ಆಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ಉಳಿದ ರಾಜ್ಯದಲ್ಲೂ ಈ ಯೋಜನೆ ಜಾರಿಗೆ ಮಾಡಬೇಕು. ಇಲ್ಲದೇ ಹೋದರೆ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಒಂದು ದೇಶ ಒಂದು ವೇತನ ಮಾಡಬೇಕು. ಈಗಾಗಲೇ ಒಂದು ದೇಶ ಒಂದು ಟ್ಯಾಕ್ಸ ಜಾರಿಗೆ ಇದೆ. ಅದಕ್ಕಾಗಿ ಶಿಕ್ಷಕರ ಬೇಡಿಕೆ ಪೂರೈಸಬೇಕು ಎಂದರು.

ಈ ವೇಳೆ ಕೆಎಸ್ಪಿಎಸ್ಟಿಎ ಅಧ್ಯಕ್ಷ ಕೆ. ನಾಗೇಶ, ಚಂದ್ರಶೇಖರ ನುಗ್ಗಲಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

Latest Indian news

Popular Stories