ವಿಜಯಪುರ | ಹಣಕ್ಕಾಗಿ ತಂದೆ ಹತ್ಯೆಗೈದ ಮಗ ಅಂದರ್

ವಿಜಯಪುರ: ಹಣಕ್ಕಾಗಿ ತಂದೆಯನ್ನೇ ಮಗ ಹತ್ಯೆಗೈದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು.

ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 30 ಲಕ್ಷ ರೂ. ಹಣಕ್ಕಾಗಿ ಶಿವಾನಂದ ಕೋಟ್ಯಾಳ ಹತ್ಯೆ ಮಾಡಲಾಗಿತ್ತು. ಇನ್ನು ಈ ಪ್ರಕರಣ ಭೇದಿಸಿರುವ ಪೊಲೀಸರು ಶಿವಾನಂದ ಕೋಟ್ಯಾಳ ಮಗ ಮುತ್ತುರಾಜ ಕೊಟ್ಯಾಳ, ಮಹಾದೇವಿ ಕೋಟ್ಯಾಳ, ಶ್ರೀಧರ್ ಹುಲೆಪ್ಪಗೋಳ ಬಂಧಿಸಿದ್ದಾರೆ.

ಹಣಕ್ಕಾಗಿ ಪದೇ ಪದೇ ತಂದೆ ಮಗನ ಮಧ್ಯೆ ಗಲಾಟೆ ಆಗುತ್ತಿತ್ತು. ಈ ಹಿನ್ನೆಲೆ ಮಲಗಿದ ವೇಳೆ ತಂದೆ ಶಿವಾನಂದನ್ನು ತಲೆದಿಂಬುವಿಂದ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಇನ್ನು ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

Latest Indian news

Popular Stories