ವಿಜಯಪುರ: ಹೃದಯಾಘಾತದಿಂದ ಜೆಡಿಎಸ್ ಅಭ್ಯರ್ಥಿ ನಿಧನ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಸೋಮಜಾಳ (55) ನಿಧನರಾಗಿದ್ದಾರೆ.


ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪರಿಚಯಸ್ತರ ಮನೆಯಲ್ಲಿ ಮಾತನಾಡುತ್ತ ಕುಳಿತಾಗ ಏಕಾಏಕಿ‌ ಶಿವಾನಂದ ಪಾಟೀಲ ಸೋಮಜಾಳ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೆ ತೀವ್ರ ಹೃದಯಾಘಾತದಿಂದ ಅಸುನೀಗಿದ್ದಾರೆ.


ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಇರುವಾಗಲೇ ಅಭ್ಯರ್ಥಿ ಮೃತಪಟ್ಟಿದ್ದಾರೆ. ಸಿಂದಗಿ ಅಭ್ಯರ್ಥಿ ದಿಢೀರ್‌ ಸಾವಿಸಿನಿಂದ ಹೆಚ್‌ಡಿಕೆಗು ಶಾಕ್ ಆಗಿದೆ.
ಅಲ್ಲದೇ, ಹೃದಯಾಘಾತದಿಂದ ಜೆಡಿಎಸ್ ಅಭ್ಯರ್ಥಿ ನಿಧನ ವಿಚಾರಕ್ಕೆ ಎಚ್‌ಡಿಕೆ ಮೂರು ಟ್ವಿಟ್ ಮಾಡಿದ್ದಾರೆ. ಶಿವಾನಂದ ಪಾಟೀಲ ಸೋಮಜಾಳ ಅಕಾಲಿಕ ಮರಣ ನನಗೆ ಆಘಾತ ತಂದಿದೆ. ಮಾಜಿ ಯೋಧ, ಸಿಂದಗಿ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ್ (54) ರಾತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದಿ. 18 ರಂದು ಇಡೀ ದಿನ ಸಿಂದಗಿ‌ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು, ಬಳಿಕ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಅವರು ಸಮಾಜಸೇವೆಯ ಅದಮ್ಯ ಹಂಬಲ ಹೊಂದಿದ್ದರು, ಪರಿಚಯವಾದ ಅಲ್ಪಕಾಲದಲ್ಲೆ ಆತ್ಮೀಯರಾಗಿದ್ದರು ಎಂದು ಎಚ್‌ಡಿಕೆ ಟ್ವಿಟ್ ಮಾಡಿದ್ದಾರೆ.

Latest Indian news

Popular Stories