ಶಿಕ್ಷಕ ಆತ್ಮಹತ್ಯೆ ಪ್ರಕರಣ; ಬಿಇಓ ಸೇರಿ ನಾಲ್ವರು ಅಮಾನತ್ತು

ವಿಜಯಪುರ : ಶಿಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಓ ಹಾಗೂ ಮೂವರು ಶಿಕ್ಷಕರನ್ನು ಅಮಾನತ್ತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.


ನಿನ್ನೆ ರಾತ್ರಿಯಷ್ಟೆ ಶಿಕ್ಷಕನೋರ್ವ ಸಿಂದಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಕೂಡ ಸಿಕ್ಕಿತ್ತು. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಇಓ ಹಾಗೂ ಶಿಕ್ಷಕರ ವಿರುದ್ಧ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದರು.


ಅಲ್ಲದೇ, ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಇಂದು ಮಧ್ಯಾಹ್ನ ಸಿಂದಗಿ ಬಿಇಓ ಎಚ್.ಎಂ.ಹರನಾಳ ಹಾಗೂ ಶಿಕ್ಷರಾದ ಜಿ.ಎನ್.ಪಾಟೀಲ, ಎಸ್.ಎಲ್.ಭಜಂತ್ರಿ, ಬಿ.ಎಂ.ತಳವಾರ ಅವರನ್ನು ವಿಜಯಪುರ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅವರು ವಿಚಾರಣೆ ಕಾಯ್ದಿರಿಸಿ ಅಮನಾತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಬಿಇಓ ಸೇರಿ ನಾಲ್ವರು ವಿರುದ್ಧ ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories