ಶಿಕ್ಷಣಕ್ಕೆ ಇರುವ ಶಕ್ತಿ ಬೇರಾವುದರಲ್ಲಿ ಇಲ್ಲ: ಯು.ಟಿ.ಖಾದರ್

ವಿಜಯಪುರ; ಶಿಕ್ಷಣಕ್ಕೆ ಇರುವ ಶಕ್ತಿ ಬೇರಾವುದರಲ್ಲಿ ಇಲ್ಲ ಕಾರಣ ಶಿಕ್ಷಣದ ಮಹತ್ವವನ್ನು ಅರಿತುಕೊಂಡು ಪಾಲಕರು ತಮ್ಮ ಮಕ್ಕಳೀಗೆ ಉತ್ತಮ ಸಂಸ್ಕಾರವುಳ್ಳ ಶಿಕ್ಷಣವನ್ನು ಕೊಡಿಸಿ ಅದುವೇ ದೊಡ್ಡ ಆಸ್ತಿ ಗಳೀಸಿದಂತಾಗುತ್ತದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.


ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಲೋಯಲಾ ಶಾಲೆಯಲ್ಲಿ ಹಮ್ಮಿಕೊಂಡ ಶಾಲಾ ಸಂಸತ್ತ ಉದ್ಘಾಟನಾ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದ ಅವರು, ಸರ್ವಜನರನ್ನು, ಸರ್ವಧರ್ಮವನ್ನು ಪ್ರೀತಿಸುವಂತದ್ದೆ ಅದುವೆ ಮಾನವೀಯತೆ ಯಾರಿಗೆ ದೇವರ ಭಯವಿದಿಯೋ ಅವರು ಮಾನವಿಯತೆ ಬೆಳೆಸಿಕೊಳ್ಳಲು ಸಾಧ್ಯ. ಮನೆಯ ಮಕ್ಕಳ ಕಣ್ಣುಗಳನ್ನು ಬೇರೆಡೆ ಹರಿದಾಡಲು ಬಿಡಬೇಡಿ, ಮಕ್ಕಳಲ್ಲಿ ತಾಳ್ಮೆಯನ್ನು ಬೆಳೆಯಿಸಿ ಅಲ್ಲದೆ ಬಾರತ ದೇಶವನ್ನು ಅತ್ಯುತ್ತಮವಾಗಿ ಬೆಳೆಸಲು ನಮ್ಮೆಲ್ಲ ಪಾತ್ರ ಬಹುಮುಖ್ಯವಾಗಿದೆ ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದರು ಸಾದನೆ ಮಾಡಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಅದಕ್ಕೆ ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಆಸ್ತಿಯ ಮಾಡುವ ಬದಲು ಶಿಕ್ಷಣವಂತರನ್ನಾಗಿ ಮಾಡಿ ಭಾರತದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸಿ ಆವಾಗ್ಗೆ ಸದೃಢ ದೇಶವಾಗಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ. ಅಂಬೇಡ್ಕರರು ಬರೆದ ಸಂವಿದಾನಕ್ಕೆ ಹೆಚ್ಚು ಗೌರವಕೊಟ್ಟರೆ ನಮಗೆ ಗೌರವ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅದ್ಯಕ್ಷತೆ ವಹಿಸಿದ ಲೋಯಲಾ ಸಂಸ್ಥೆಯ ಅದ್ಯಕ್ಷ ಫ್ರ್ಯಾನ್ಸಿ ಮೆನೆಜೀಸ್ ಮಾತನಾಡಿ, ಲೋಯಲಾ ಸಂಸ್ತೆಯ ಹಳೆಯ ವಿದ್ಯಾರ್ಥಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ ಅವರು ಅನೇಕ ಹಂತಗಳನ್ನು ದಾಟಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಉಲ್ಲಾಳ ಕ್ಷೇತ್ರವನ್ನು ಹಲವಾರು ರಂಗಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಸತ್ ಸದಸ್ಯರಿಗೆ ಸ್ಥಾನಗಳನ್ನು ಹಂಚಿಕೊಟ್ಟು ಅವರನ್ನು ಗವರವಿಸಲಾಯಿತು.
ಶಾಸಕ ಅಶೋಕ ಮನಗೂಳಿ, ಇಂಡಿ ಉಪವಿಬಾಗಾಧಿಕಾರಿ ಆಬಿದ ಗದ್ವಾಲ, ಕಾಂಗ್ರೆಸ್ ಮುಖಂಡರಾದ ಮಹ್ಮದಪಟೇಲ ಬಿರಾದಾರ, ರಫೀಕ ವಡಿಗೇರಿ, ಸಂಗಮ ಸಂಸ್ತೆಯ ನಿರ್ದೇಶಕರಾದ ಸಂತೋಷ ವಾಲ್ಡರ, ನಾಗೇಶ ರಡ್ಡಿ ಸೇರಿದಂತೆ ಹಲವರು ಇದ್ದರು.
ಸಂಗಮ ಸಂಸ್ಥೆಯ ನಿರ್ದೇಶಕ ಜೀವನ ಡಿ ಸೋಜಾ ಸ್ವಾಗತಿಸಿದರು. ಪ್ರಾಚಾರ್ಯ ಲಾಂಚಿ ಫೇರ್ನಾಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೊಪಿಯಾ ಪಿರಿಯಾ ನಿರೂಪಿಸಿದರು.

Latest Indian news

Popular Stories