ವಿಜಯಪುರ: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳಿಗೆ ಅಗ್ನಿ ಸ್ಪರ್ಶ ನೀಡಲಾಯಿತು. ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ಸಕಲ ವಿಧಿವಿಧಾನಗಳ ಮೂಲಕ ಅಗ್ನಿ ಸ್ಪರ್ಶ ನೀಡಲಾಯಿತು. ಇದಕ್ಕೂ ಮೊದಲು ವಿಜಯಪುರ ನಗರದ ಸೈನಿಕ ಶಾಲೆಯಿಂದ ಜ್ಞಾನಯೋಗಾಶ್ರಮದ ವರೆಗೂ ಅಂತಿಮ ಯಾತ್ರೆ ನಡೆಯಿತು. ಈ ವೇಳೆಯಲ್ಲಿ ಸಹಸ್ರಾರು ಭಕ್ತರು ಅಂತಿಮ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ ಇಲಾಖೆಯಿಂದ ಸೂಕ್ತ ಪೊಲೀಸ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಯಾತ್ರೆಯಲ್ಲಿ 300 ಮಠಾಧೀಶರು, 450 ಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು ಇದ್ದರು.