ವಿಜಯಪುರ: ಇವರಿಗೆ ತಾಕತ್ತು ಇದ್ದರೆ ಸಿಡಿ ತೆಗೆಯಲಿ ಎಂದು ಸಚಿವ ಮುರುಘೇಶ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ಮಾಡಿದರು.
ವಿಜಯಪುರ ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಕತ್ತು ಇದ್ರೆ ಸಿಡಿ ಹೊರಕ್ಕೆ ತೆಗೆಯಲಿ. ಸಿಡಿ ವಿಚಾರದಲ್ಲಿ ಸಚಿವ ನಿರಾಣಿ ಸ್ಟೇ ತಂದಿಲ್ವಾ. ಸಿಡಿಯಲ್ಲಿ ಎರಡು ಫ್ಯಾಕ್ಟರಿ ಇದಾವೆ. ಒಂದು ಬಿಜೆಪಿ, ಮತ್ತೊಂದು ಕಾಂಗ್ರೆಸ್ ನಲ್ಲಿ ಫ್ಯಾಕ್ಟರಿ ಇದೆ ಎಂದು ಗಂಭೀರ ಆರೋಪ ಮಾಡಿದರು. ಇನ್ನು ಸಿಡಿ ಇಟ್ಕೊಂಡೆ ಇವರು ಮಂತ್ರಿ ಆಗಿದ್ದಾರೆ. ಯಾರಾದರೂ ಸಿಡಿ ಇಟ್ಕೊಂಡು ನಾನು ಅಂತಹ ಹಲ್ಕಾ ಕೆಲಸ ಮಾಡಲ್ಲ ಎಂದರು.
ಅಲ್ಲದೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧ ನಿರಾಣಿ, ವಿಜಯೇಂದ್ರ ಹಣ ಹೂಡಿಕೆ ಮಾಡಿದ್ರು. ಇಬ್ಬರು ಹಣ ಕಳಿಸಿಲ್ಲ ಎಂದು ಧರ್ಮಸ್ಥಳದ ಮಂಜುನಾಥ ಮೇಲೆ ಆಣೆ ಮಾಡ್ಲಿ ಎಂದು ಸವಾಲ್ ಹಾಕಿದರು.
ಬಿಜೆಪಿ ಅಭ್ಯರ್ಥಿಗಳಿಗೆ ಹಣ ಬಂದಿಲ್ಲ. ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ. ವಿಜಯಪುರ ಜನತೆ ಹಣ ತೆಗೆದುಕೊಳ್ಳದೇ ಮತ ಹಾಕಿದ್ದಾರೆ. ನಿರಾಣಿ ಬೆಂಬಲಿಗರು ಹಣ ಹೊಡೆದುಕೊಂಡಿದ್ದಾರೆ. ಇದೆಲ್ಲ ಹೈ ಕಮಾಂಡ್‌ಗೆ ಮಾಹಿತಿ ಹೋಗಿದೆ ಎಂದು ವಾಗ್ದಾಳಿ ಮಾಡಿದರು.
ಅಲ್ಲದೇ, ಇಂವ್ ಯಾರಿ ನನಗೆ ಟಿಕೆಟ್ ಕೊಡಲು ಎಂದು ಸಚಿವ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.