ಸಹಾಯಕ ವೈದ್ಯಾಧಿಕಾರಿ ತಾತ್ಕಾಲಿಕ ಹುದ್ದೆ ನೇಮಕ: ಜು.13ರಂದು ನೇರ ಸಂದರ್ಶನ

ವಿಜಯಪುರ: ಕೃಷಿ ಮಹಾವಿದ್ಯಾಲಯ ವಿಜಯಪುರದಲ್ಲಿ ಸಹಾಯಕ ವೈದ್ಯಾಧಿಕಾರಿ ತಾತ್ಕಾಲಿಕ ಹುದ್ದೆ ನೇಮಕಾತಿಗೆ ಕೃಷಿ ಮಹಾವಿದ್ಯಾಲಯದ ಡೀನ್ ಸಂದರ್ಶನ ಕೊಠಡಿಯಲ್ಲಿ ಜುಲೈ 13 ರಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ ಏರ್ಪಡಿಸಲಾಗಿದೆ.


ಸದರಿ ಹುದ್ದೆಗೆ ಆಯ್ಕೆ ಬಯಸುವ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ತಮ್ಮ ವಿದ್ಯಾರ್ಹತೆಗೆ ಸಂಂಧಿಸಿದ ಎಲ್ಲ ಮೂಲ ದಾಖಲೆಗಳು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿಗಳು ಮತ್ತು ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಿದ ಸಂದರ್ಶನದಲ್ಲಿ ಹಾಜರುಪಡಿಸಬೇಕು. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು. ನಿಗದಿತ ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಮಹಾವಿದ್ಯಾಲಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Latest Indian news

Popular Stories