ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನಲೆ ಸರಳ ಸಿದ್ಧೇಶ್ವರ ಜಾತ್ರೆ ಆಚರಣೆ

ವಿಜಯಪುರ : ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಪ್ರಯುಕ್ತ ಈ ಬಾರಿಯ ಐತಿಹಾಸಿಕ ಸಿದ್ದೇಶ್ವರ ಜಾತ್ರೆಯನ್ನು ಸಂಕ್ಷಿಪ್ತವಾಗಿ ಆಚರಿಸಲಾಗುವುದು ಎಂದು ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಸಂ. ಹಿರೇಮಠ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 12.01.2023 ರಿಂದ 18.01.2023 ರವರೆಗೆ ಜಾತ್ರೆಯನ್ನು ಆಚರಿಸಲು ನಿರ್ಧರಿಸಿದ್ದು, ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ದಿನಾಂಕ 12ರಂದು ಸಾಯಂಕಾಲ 6 ಗಂಟೆಗೆ ನಂದಿ ಧ್ವಜಗಳ ಪೂಜೆ, 13 ರಂದು 770 ಲಿಂಗಗಳಿಗೆ ಅಭಿಷೇಕ, 14ರಂದು ಭೋಗಿ, 15 ರಂದು ಹೋಮ ಹವನ ಹಾಗೂ ನಂದಿ ಧ್ವಜಗಳ ಮೆರವಣಿಗೆ, 16ರಂದು ನಡೆಯಲಿದೆ ಎಂದು ತಿಳಿಸಿದರು.


ಈ ಬಾರಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲು ನಿರ್ಧರಿಸಿದ್ದೆವು, ಆದರೆ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ಜಿಲ್ಲೆಯೇ ಬಡವಾಗಿದೆ. ಹೀಗಾಗಿ ಯಾವುದೇ ಮನರಂಜನೆ ಕಾರ್ಯಕ್ರಮಗಳಿಲ್ಲದೆ ಸಂಕ್ಷಿಪ್ತವಾಗಿ ಕೇವಲ ಧಾರ್ಮಿಕ ಆಚರಣೆಗಳನ್ನು ಮಾತ್ರ ಮಾಡಲಾಗುವುದು ಎಂದು ತಿಳಿಸಿದರು.


ಈ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ಯಾವುದೇ ರೀತಿಯ ಅಂಗಡಿಗಳಿಗೆ ಅವಕಾಶ ನೀಡಿಲ್ಲ, ಶ್ರೀಗಳಿಗೆ ಗೌರವ ನೀಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು. ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ವೇದಿಕೆಯನ್ನು ನಿರ್ಮಿಸಲಾಗುವುದು, ಅವರ ಸಂಸ್ಮರಣೆ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

Latest Indian news

Popular Stories