ವಿಜಯಪುರ: ಸಿದ್ಧೇಶ್ವರ ಶ್ರೀಗಳಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ, ಆಕ್ಸಿಜನ್ ನೀಡಲಾಗುತ್ತಿದೆ ಎಂದು ವಿಜಯಪುರದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್.ಬಿ. ಪಾಟೀಲ್ ಸೋಮವಾರ ಹೇಳಿದರು.
ಶ್ರೀಗಳಿಗೆ ಬಿಪಿಯಲ್ಲಿ ವ್ಯತ್ಯಾಸ ಆಗಿದೆ. ಚಿಕಿತ್ಸೆಗೆ ಬೇಕಾದ ಮೆಡಿಕಲ್ ಮೆಟಿರಿಯಲ್ಸ್ ಎಲ್ಲಾ ಸನ್ನದ್ದವಾಗಿ ಇವೆ. ನಾವು ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ. ಎಲ್ಲಾ ಎಕ್ಯೂಪಮೆಂಟ್ ತರಲಾಗಿದೆ. ಬೆಳಗ್ಗೆ ಗಂಜಿ ಕುಡಿದಿದ್ದು ಅಷ್ಟೆ, ಅದಾದ ನಂತ್ರ ಅಹಾರ ಸೇವಿಸಿಲ್ಲ ಎಂದರು. ಅಲ್ಲದೇ, ಆಸ್ಪತ್ರೆಗೆ ನಿರಾಕರಣೆ ಮಾಡುತ್ತಿದ್ದಾರೆ. ಅವರ ಅಣತಿಯಂತೆ ನಾವು ನಡೆಯುತ್ತಿದ್ದೇವೆ ಎಂದರು.