ಹುಡುಗಿ ಜೊತೆ ಅಸಭ್ಯ ವರ್ತನೆ: ಯುವಕರಿಬ್ಬರ ತಲೆ ಬೋಳಿಸಿ, ಮೆರವಣಿಗೆ

ವಿಜಯಪುರ: ಹುಡುಗಿ ವಿಚಾರಕ್ಕೆ ಯುವಕರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ್ ತಾಂಡಾದ ಬಸವ ನಗರದಲ್ಲಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲಿ ಹುಡುಗಿ ಜೊತೆಗೆ ಇಬ್ಬರು ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದ ಗ್ರಾಮದ ಲಂಬಾಣಿ ಸಮುದಾಯದ ಮುಖಂಡರು ಯುವಕರನ್ನು ಕರೆಸಿ ಅವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

ಅವಳಿ ಜವಳಿ ಸಹೋದರರಾಗಿರುವ ತೇಜು ಚವ್ಹಾಣ, ರಾಜು ಚವ್ಹಣ ಅವರನ್ನು ಮುಖಂಡರು ಹಾಗೂ ಗ್ರಾಮದ ಪಂಚರು ಈ ಇಬ್ಬರು ಯುವಕರ ತಲೆ‌ಬೋಳಿಸಿ ಮೆರವಣಿಗೆ ಮಾಡಿದ್ದಾರೆ.

ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Indian news

Popular Stories