ವಿಜಯಪುರ:ತೆರೆದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ

ವಿಜಯಪುರ : ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದ್ದು ಇದೀಗ 500 ಅಡಿಯ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ನಿನ್ನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕರಪ್ಪ ಮುಜುಗೊಂಡ ಎಂಬುವವರ ಜಮೀನಿನಲ್ಲಿ ಸುಮಾರು 500 ಅಡಿ ಆಳದಷ್ಟು ಕೊಳವೆ ಬಾವಿಯನ್ನು ಕೊಡೆಯಲಾಗಿತ್ತು. ಈ ವೇಳೆ ಕೊಳವೆ ಬಾವಿಯಿಂದ ನೀರು ಬರದೇ ಹಿನ್ನೆಲೆಯಲ್ಲಿ ಅದನ್ನು ಹಾಗೆ ಬಿಟ್ಟಿದ್ದರು. ಈ ವೇಳೆ ಶಂಕರಪ್ಪ ಮುಜಗೊಂಡ್ ಅವರ ಮೊಮ್ಮಗ ಸಾತ್ವಿಕ್ ಮುಜುಗೊಂಡ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ.ಅಂದಾಜು 20 ರಿಂದ 25 ಅಡಿ ಒಳಗೆ ಬಾಲಕ ಸಿಲುಕಿದ್ದಾನೆ ಎಂದು ಶಂಕಿಸಲಾಗಿದೆ.

ತೆರೆದ ಬಾವಿಯಲ್ಲಿ ಬಾಲಕ ಸಾತ್ವಿಕ್ ಮುಜಗೊಂಡ ಎನ್ನುವ ಬಾಲಕನು ಆಟವಾಡುತ್ತಾ ಆಯತಪ್ಪಿ ತೆರೆದ ಕೊಳವೆಬಾವಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ. ಸದ್ಯ ಬಾಲಕನನ್ನು ರಕ್ಷಿಸಲು ಇದೀಗ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕೂಡ ಆಗಮಿಸಿದ್ದು,ಕಾರ್ಯಾಚರಣೆ ನಡೆಸುತ್ತಿದೆ.

Latest Indian news

Popular Stories