ಪ್ರೀತಿಸಿದ ತಪ್ಪಿಗೆ ಪ್ರಿಯಕರನಿಗೆ ಕಠೋರ ಶಿಕ್ಷೆ | ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ

ವಿಜಯಪುರ: ಪ್ರೀತಿಸಿದ ತಪ್ಪಿಗೆ ಪ್ರಿಯಕರನಿಗೆ ಕಠೋರ ಶಿಕ್ಷೆ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ಯುವಕ ರಾಹುಲ ಬಿರಾದಾರಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ ಮಾಡಲಾಗಿದೆ. ಸದ್ಯ ಸಾವು ಬದುಕಿನ ಮಧ್ಯೆ ಪ್ರಿಯಕರ ರಾಹುಲ್ ಬಿರಾದಾರ ಹೋರಾಟ ನಡೆಸುತ್ತಿದ್ದಾನೆ.

ರಾಹುಲ್ ಮೈ ತುಂಬ ಸುಟ್ಟ ಗಾಯಗಳು ಆಗಿದ್ದು, ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಯುವಕ ರಾಹುಲ್ ದಾಖಲಾಗಿದ್ದಾನೆ. ಯುವತಿ ಐಶ್ವರ್ಯ ಮದರಿ ತಂದೆ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಮನೆಗೆಲಸ ಮಾಡುತ್ತಿದವನಿಂದ ಈ ಕೃತ್ಯ ನಡೆದಿದೆ ಅಂತಾ ರಾಹುಲ್ ತಂದೆ ರಾಮನಗೌಡ ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರು ಲವ್ ಬ್ರೇಕ್ ಅಪ್ ಆಗಿತ್ತು. ಇದರಿಂದ ರಾಹುಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದನಂತೆ.

ಐದಾರು ವರ್ಷ ನನ್ನ ಜೊತೆಗೆ ಓಡಾಡಿ ಹಣ ಖರ್ಚು ಮಾಡಿಸಿದ್ದೀಯಾ ಎಂದು ಯುವತಿ ಮೇಲೆ ಸಿಟ್ಟಾಗಿದ್ದನ್ನು. ಆದ್ರೇ, ಇತ್ತೀಚೆಗೆ ಯುವತಿ ಮನೆ ಬಳಿ ಹೆಚ್ಚು ಓಡಾಡುತ್ತಿದ್ದು, ಮನೆ ಹತ್ತಿರ ಯಾಕೆ ಓಡಾಡುತ್ತಿದ್ದೀಯಾ ಎಂದು ಯುವತಿ ಮನೆಯವರು ರಾಹುಲಗೆ ಕರೆ ಮಾಡಿ ಪ್ರಶ್ನಿಸಿದ್ದರಂತೆ. ಮಾತಿಗೆ ಮಾತು ಬೆಳೆದು ನಿಮ್ಮ ಮನೆಗೆ ಬರುವೆ ಎಂದು ಯುವತಿ ಮನೆಗೆ ರಾಹುಲ್ ಹೋಗಿದ್ದನಂತೆ. ಆಗ ಪ್ರೇಯಸಿ ಐಶ್ವರ್ಯ ಮನೆಯವರೊಂದಿಗೆ ಮಾತನಾಡುತ್ತಿದ್ದಾಗ ಯುವತಿ ತಂದೆ ಅಪ್ಪು ಮದರಿ ರಾಹುಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Latest Indian news

Popular Stories