ವಿಜಯಪುರ: ಲೇಡಿ ಕಂಡಕ್ಟರ್ಗೆ ಪ್ರಯಾಣಿಕ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆಂದು ಆರೋಪಿಸಿ ಲೇಡಿ ಕಂಡಕ್ಟರ್ ಬೂಟಿನಿಂದ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಚಿಲ್ಲರೆ ಹಣ ಕೊಡುವ ವಿಷಯವಾಗಿ ಪ್ರಯಾಣಿಕ ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಲೇಡಿ ಕಂಡಕ್ಟರ್ ಬೂಟಿನಿಂದ ಧರ್ಮದೇಟು ನೀಡಿದ್ದಾರೆ.
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.