ಕಾರ್ಯಕರ್ತರ ಸ್ಪೂರ್ತಿಯೇ ನನ್ನ ಆಸ್ತಿ: ಜಿಗಜಿಣಗಿ

ವಿಜಯಪುರ : `ನನಗೆ ಸೋಲು ಗೆಲುವು ಮುಖ್ಯವಲ್ಲ, ನನ್ನ ಕಾರ್ಯಕರ್ತ ಬಂಧುಗಳ ಸ್ಪೂರ್ತಿ ಸದಾ ನನ್ನ ಜೊತೆಗಿರುವುದೇ ನನ್ನ ಆಸ್ತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರದ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಲಿತನಾದ ನಾನು ಈ ಮಟ್ಟಕ್ಕೆ ಬೆಳೆಯಲು ಕಾರ್ಯಕರ್ತ ಬಂಧುಗಳ ಅನುಗ್ರಹವೇ ಕಾರಣ, ರಾಜಕಾರಣದಲ್ಲಿ ಜಾತಿ ಎಂಬುದು ಮುಖ್ಯವಲ್ಲ, ಕೇವಲ ಒಂದೇ ಸಮಾಜದ ಬೆಂಬಲದಿಂದ ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಿಲ್ಲ, ಉತ್ತಮ ನಾಯಕನಾಗಿ ಬೆಳೆದು ಬರಲು ಎಲ್ಲ ಸಮಾಜಗಳ ಆಶೀರ್ವಾದ, ಬೆಂಬಲವೇ ಕಾರಣ ಎಂದರು.

ನನ್ನ ಅನುಭವ ಚುನಾವಣೆಗಳಲ್ಲಿ ಪ್ರಸಕ್ತ ಚುನಾವಣೆ ಅತ್ಯಂತ ಮಹತ್ವದ್ದು, ಸಣ್ಣ ಪುಟ್ಟ ಗೊಂದಲಗಳು ಸಹ ಇಲ್ಲದೇ ಅತ್ಯಂತ ಸುಸೂತ್ರವಾಗಿ ನಡೆದ ಚುನಾವಣಾ ಇದಾಗಿದೆ, ಕಾರ್ಯಕರ್ತರ, ಮುಖಂಡರ ಶ್ರಮಕ್ಕೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ, ಈ ಋಣವನ್ನು ನಾನು ಜೀವನದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಜಿಗಜಿಣಗಿ ಹೇಳಿದರು. ಈ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ನಾನು ಗೆಲುವು ಸಾಧಿಸುವುದು ಶತಸಿದ್ಧ, ನನ್ನ ಕಾರ್ಯಕರ್ತ ಬಂಧುಗಳು ಆ ರೀತಿ ನನ್ನ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿರುವ ಕೆಟ್ಟ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆ ಆಲಿಸುತ್ತಿಲ್ಲ, ನಿಮ್ಮ ಸಮಸ್ಯೆ ಏನು ಎಂಬ ಸೌಜನ್ಯದಿಂದ ಕೇಳುತ್ತಿಲ್ಲ, ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೂ ಬರಗಾಲ ಪರಿಸ್ಥಿತಿ ಇತ್ತು, ಆದರೆ ಬಿ.ಎಸ್. ಯಡಿಯೂರಪ್ಪ ಅವರು ರೈತರಿಗೆ ಅಭಯ ನೀಡಿ ವೈಜ್ಞಾನಿಕವಾಗಿ ಪರಿಹಾರ ಹಣ ನೀಡಿದರು, ಆದರೆ ಈ ಬದ್ಧತೆ ಈ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಸಮರ್ಪಣಾ ಮನೋಭಾವದ ಶ್ರಮ ಹಾಗೂ ಅವಿರತ ಓಡಾಟದ ಫಲವಾಗಿ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 1 ಲಕ್ಷ ಮತಗಳ ಅಂತರದಿಂದ ಗೆಲುವುದು ಸಾಧಿಸುವುದು ಶತಸಿದ್ಧ ಎಂದರು.

ಕಾರ್ಯಕರ್ತ ಬಂಧುಗಳು ಚುನಾವಣೆ ಸಂದರ್ಭದಲ್ಲಿ ಅತ್ಯಂತ ಉತ್ಸಾಹದಿಂದ ಮೋದಿ ಸರ್ಕಾರದ ಸಾಧನೆ ಹಾಗೂ ಸಂಸದ ಜಿಗಜಿಣಗಿ ಅವರ ಸಾಧನೆಗಳನ್ನು ಮನೆ-ಮನೆಗೆ ತಿಳಿಸುವ ಮೂಲಕ ಅತ್ಯಂತ ಮಹತ್ವದ ಕಾರ್ಯ ನಿಭಾಯಿಸಿದರು ಎಂದರು. ಈಗ ಜಿಲ್ಲಾ ಪಂಚಾಯತ ಸೇರಿದಂತೆ ಅನೇಕ ಚುನಾವಣೆಗಳು ಎದುರಾಗಬಹುದು, ಆದರೆ ಯಾವ ಸಮಯದಲ್ಲಿಯೂ ಚುನಾವಣೆ ಬಂದರೂ ಸಮರ್ಪಣಾ ಮನೋಭಾವದಿಂದ ದುಡಿಯುವ ಕಾರ್ಯಕರ್ತರ ದೊಡ್ಡ ಪಡೆಯೇ ಬಿಜೆಪಿಯ ದೊಡ್ಡ ಆಸ್ತಿ ಎಂದರು. ಪ್ರಸ್ತುತ ರಾಜ್ಯ ಸರ್ಕಾರ ಒಂದು ರೀತಿ ಅನಿಷ್ಠ ಸರ್ಕಾರ, ಮಾರಕ ಸರ್ಕಾರವಾಗಿದೆ, ಬರ ಪರಿಸ್ಥಿತಿಯಲ್ಲಿ ರೈತರಿಗೆ ಅಭಯ ನೀಡಬೇಕಾದ ಸರ್ಕಾರ ಬೀಜ-ರಸಗೊಬ್ಬರ ದರವನ್ನು ಏರಿಕೆ ಮಾಡಿ ಬರದ ಬರೆಯ ಗಾಯದ ಮೇಲೆ ಮತ್ತೊಂದು ಬರೆ ಎಳೆಯುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಕಾಸುಗೌಡ ಬಿರಾದಾರ,

Latest Indian news

Popular Stories