ವಿಜಯಪುರ-ಮಂಗಳೂರು ರೈಲು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ

ವಿಜಯಪುರ, ಫೆಬ್ರವರಿ 07: ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ಒತ್ತಾಯಕ್ಕೆ ರೈಲ್ವೆ ಇಲಾಖೆ ಕೊನೆಗೂ ಮಣಿದಿದೆ. ವಿಜಯಪುರ-ಮಂಗಳೂರು ಜಂಕ್ಷನ್ ನಡುವಿನ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವ ದಿನಾಂಕ ಘೋಷಣೆ ಮಾಡಿದೆ.

ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ವಿಜಯಪುರ-ಮಂಗಳೂರು ಜಂಕ್ಷನ್ ನಡುವಿನ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್ ತನಕ ಏಪ್ರಿಲ್ 1ರಿಂದ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ.

ಈಗ ಅಧಿಕೃತ ದಿನಾಂಕ ಘೋಷಣೆ ಮಾಡಲಾಗಿದೆ. ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವಂತೆ ಅಭಿಯಾನ ನಡೆದಿತ್ತು. ಜನಪ್ರತಿನಿಧಿಗಳು ಸಹ ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದರು.ವಿಜಯಪುರ-ಮಂಗಳೂರು ರೈಲು; ಪ್ರಯಾಣಿಕರ ಒತ್ತಾಯಕ್ಕೆ ಮಣಿದ ಇಲಾಖೆ ರೈಲು ವಿಸ್ತರಣೆ: ನೈಋತ್ಯ ರೈಲ್ವೆ 20223ರ ಡಿಸೆಂಬರ್‌ನಲ್ಲಿ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ವಿಸ್ತರಣೆ ಮಾಡಿದೆ.

ರೈಲು ನಂಬರ್ 07377 1/1/2024 ರಿಂದ 31/3/2024ರ ತನಕ ವಿಸ್ತರಣೆಯಾಗಿದೆ. ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲು 2/1/2024 ರಿಂದ 1/4/2024ರ ತನಕ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.ಈಡೇರದ ಬೇಡಿಕೆ; ಮಂಗಳೂರು-ವಿಜಯಪುರ ರೈಲು ಮತ್ತೆ ಸೇವೆ ವಿಸ್ತರಣೆ ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಈಗ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಿರುವುದರಿಂದ ಈಗಿರುವ ವೇಳಾಪಟ್ಟಿಯ ಅನ್ವಯವೇ ರೈಲು ಸಂಚಾರ ನಡೆಸಲಿದೆಯೇ? ಎಂದು ಕಾದು ನೋಡಬೇಕಿದೆ. ಈ ಕುರಿತು ಇನ್ನೂ ಅಧಿಕೃತ ಆದೇಶ ಬರಬೇಕಿದೆ.

ಸದ್ಯದ ವೇಳಾಪಟ್ಟಿಯಂತೆ ವಿಜಯಪುರ-ಮಂಗಳೂರು ಜಂಕ್ಷನ್ (07377) ರೈಲು ಸಂಜೆ 4 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್‌ಗೆ ಬರಲಿದೆ. ಮಂಗಳೂರು ಜಂಕ್ಷನ್-ವಿಜಯಪುರ (07378) ರೈಲು 2.45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ.ವಿಜಯಪುರ-ಮಂಗಳೂರು ನಡುವಿನ ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಪ್ರಯಾಣಿಕರು, ಜನಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದರು. ಈ ಕುರಿತು ನೈಋತ್ಯ ರೈಲ್ವೆ, ರೈಲ್ವೆ ಸಚಿವರಿಗೆ ಪತ್ರವನ್ನು ಬರೆಯಲಾಗಿತ್ತು. ಆನ್‌ಲೈನ್ ಮೂಲಕ ಅಭಿಯಾನವನ್ನೂ ನಡೆಸಲಾಗಿತ್ತು.ಈ ರೈಲು ತತ್ಕಾಲ್ ಮಾದರಿಯಾದ ಕಾರಣ ದರ ಹೆಚ್ಚಿದೆ

Latest Indian news

Popular Stories