ವಿಜಯಪುರ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೊಫೆಸರ್ ಪಿ.ಎಚ್.ಡಿ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಮ್ಯಾನೇಜ್ಮೆಂಟ್ ವಿಭಾಗದ ಪ್ರೋ. ಮಲ್ಲಿಕಾರ್ಜುನ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ಕಳೆದ ಫೆ. 27ರಂದು ವಿಧ್ಯಾರ್ಥಿನಿ ಮಹಿಳಾ ವಿವಿ ಕುಲಪತಿ ಪ್ರೊ. ತುಳಸೀಮಾಲಾ ಅವರಿಗೆ ದೂರು ನೀಡಿದ್ದಾರೆ. ಇನ್ನು ವಿಧ್ಯಾರ್ಥಿನಿಯ ದೂರನ್ನು ಕುಲಪತಿ ಪ್ರೊ. ತುಳಸೀಮಾಲಾ ಅವರು ಆಂತರಿಕ ದೂರು ಸಮೀತಿಗೆ ರವಾನಿಸಿದ್ದಾರೆ. ಆಂತರಿಕ ದೂರು ಸಮಿತಿಯು ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.
ಪ್ರೋ. ಮಲ್ಲಿಕಾರ್ಜುನ ಎನ್ಎಲ್ 2017 ರಿಂದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಧ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.