ಕಾರವಾರ: ಕೃತಕ ಬಂಡೆಸಾಲು (ಕಾಂಕ್ರೀಟ್ ಆಕೃತಿಗಳನ್ನು) ಮೂರು ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಬಿಡುವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ತೆರಳಿದ್ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಸಮುದ್ರದಲ್ಲಿ ಈಜಿ ಸಾಹಸ ಮೆರೆದಿದ್ದಾರೆ .
ಭಟ್ಕಳದ ಬೆಳಕೆ ಯಿಂದ ಸಮುದ್ರದಲ್ಲಿ ನಾಲ್ಕೈದು ನಾಟಿಕಲ್ ಮೈಲು ದೂರದಲ್ಲಿ ಈ ಸಾಹಸ ಮಾಡಿದರು. ಬಾಲ್ಯದಲ್ಲಿ ಕಲಿತ ಸಮುದ್ರ ಈಜು ನನ್ನನ್ನು ಇವತ್ತು ಉತ್ತೇಜಿಸಿತು ಎಂದು ಸಚಿವ ವೈದ್ಯ ಮಾಧ್ಯಮಗಳಿಗೆ ಹೇಳಿದರು. ಆಳ ಸಮುದ್ರದಲ್ಲಿ ಅವರು ಈಜಿದರು. ಶಾವಾಸನ ಸಹ ಹಾಕಿದರು. ಸಚಿವ ವೈದ್ಯ ತಾನೊಬ್ಬ ಸಾಹಸಿ ಎಂದು ಸಾಬೀತು ಮಾಡಿದರು.