ರಾಮಜನ್ಮಭೂಮಿಯಲ್ಲಿ ಮಿಂಚಿದ ಗುಮ್ಮಟ ನಗರಿ ನೃತ್ಯ ಪ್ರತಿಭೆಗಳು

ವಿಜಯಪುರ : ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡ ನಂತರ ಇಡೀ ವಿಶ್ವದ ಗಮನವನ್ನೇ ಅಯೋಧ್ಯೆ ತನ್ನತ್ತ ಸೆಳೆದಿದೆ. ಈ ಪಾವನ ನೆಲದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜಯಪುರ ನಗರದ ನಿತ್ಯಕಲಾ ನೃತ್ಯ ಅಕಾಡೆಮಿ ನೇತೃತ್ವದಲ್ಲಿ ತರಬೇತಿ ಪಡೆದ ವಿಜಯಪುರ ಜಿಲ್ಲೆಯ ಬಾಲ ಪ್ರತಿಭೆಗಳಾದ ಅಭೂತಪೂರ್ಣವಾದ ನೃತ್ಯವನ್ನು ರಾಮ ಜನ್ಮಭೂಮಿಯಲ್ಲಿ ಪ್ರದರ್ಶಿಸಿ ಸ್ಪರ್ಧೆಯಲ್ಲಿ ಅಗ್ರಸ್ಥಾನಕ್ಕೂ ಭಾಜನರಾಗಿದ್ದಾರೆ.

ಸೋಲಾಪುರದ ರಾಮಸೇತು ನೃತ್ಯ ತರಬೇತಿ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿಜಯಪುರ ತಂಡ ಉನ್ನತ ಸಾಧನೆ ತೋರಿದ್ದು, ಹೆಸರಾಂತ ನೃತ್ಯ ವಿದುಷಿ ಲಕ್ಷ್ಮಿ ತೇರದಾಳಮಠ ಅವರು ತರಬೇತಿ ನೀಡಿದ ತಂಡ ಹಿರಿಯ ಮತ್ತು ಕಿರಿಯ ಗ್ರೂಪ್ ವಿಭಾಗಗಳಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿರುವರು.

ದೇಶದ ನಾನಾ ಭಾಗಗಳಿಂದ ಹಲವಾರು ನೃತ್ಯ ಅಕಾಡೆಮಿಗಳು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಪ್ರತಿಭೆ ಮತ್ತು ಸೃಜನಾತ್ಮಕತೆಯನ್ನು ಪ್ರದರ್ಶಿಸಲಾಯಿತು. ಆದರಲ್ಲಿ ನಿತ್ಯಕಲಾ ಅಕಾಡೆಮಿಯ ತಂಡಗಳ ಅಪೂರ್ವ ಪ್ರದರ್ಶನವು ನಿರ್ಣಾಯಕರ ಮತ್ತು ಪ್ರೇಕ್ಷಕರ ಹೃದಯವನ್ನು ಗೆದ್ದಿತು.
ನಿತ್ಯಕಲಾ ಅಕಾಡೆಮಿಯ ಹಿರಿಯ ಗುಂಪು ಸೂಕ್ಷ್ಮ ನೃತ್ಯಚಲನೆಗಳನ್ನು ಸಮರ್ಪಕವಾಗಿ ಅನುಸರಿಸಿ ಗಮನಾರ್ಹ ಪ್ರದರ್ಶನ ನೀಡಿತು.

ಅದೇ ರೀತಿ, ನಿತ್ಯಕಲಾ ಅಕಾಡೆಮಿಯ ಕಿರಿಯ ಗುಂಪು ತಮ್ಮ ವಯಸ್ಸನ್ನು ಮೀರಿ ಅತ್ಯುತ್ತಮ ನೃತ್ಯ ಕೌಶಲ್ಯ ಮತ್ತು ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಮೋಹಿಸಿತು.ಈ ಸಾಧನೆ ನಮ್ಮ ತಂಡದ ಶ್ರಮ, ಪ್ರೀತಿಯ ಫಲ, ರಾಷ್ಟ್ರೀಯ ಮಟ್ಟದಲ್ಲಿ ನಾವು ದೊಡ್ಡಮಟ್ಟದ ಗುರುತಿಸಿಕೊಳ್ಳಲು ತುಂಬಾ ಸಂತೋಷವಾಗಿದೆ ಎಂದು ನೃತ್ಯವಿದೂಷಿ ಲಕ್ಷ್ಮೀ ತಮ್ಮ ಅನಿಸಿಕೆ ಹಂಚಿಕೊಂಡರು.

Latest Indian news

Popular Stories