Vijayapura: ರುಡ್‌ಸೆಟ್ ವಾರ್ಷಿಕ ವರದಿ ಬಿಡುಗಡೆಗೊಳಿಸಿದ ಡಿಸಿ

ವಿಜಯಪುರ : ಯುವಜನರಿಗೆ ಸ್ವ-ಉದ್ಯೋಗ ತರಬೇತಿಯ ಜೊತೆಗೆ ಆರ್ಥಿಕ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಜಯಪುರದ ರುಡಸೆಟ್ ಸಂಸ್ಥೆ ಪ್ರಸಕ್ತ ವರ್ಷ 797 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 620 ಅಭ್ಯರ್ಥಿಗಳು ಸ್ವ-ಉದ್ಯಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ 34 ವರ್ಷಗಳಲ್ಲಿ 27076 ಅಭ್ಯರ್ಥಿಗಳು ಇಲ್ಲಿಯವರೆಗೆ ಉದ್ಯಮ ಆರಂಭಿಸಿದ್ದಾರೆ.

ವಿಜಯಪುರದ ರುಡಸೆಟ್ ಸಂಸ್ಥೆಯಲ್ಲಿ ನಡೆದ ವಾರ್ಷಿಕ ವರದಿ ಬಿಡುಗಡೆ ಸಂದರ್ಭದಲ್ಲಿ ರುಡಸೆಟ್ ಸಂಸ್ಥೆಯ ಅಧಿಕಾರಿಗಳು ಈ ಕುರಿತು ವಿವರಣೆ ನೀಡಿದರು.

ವಾರ್ಷಿಕ ವರದಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, 1992ರಲ್ಲಿ ವಿಜಯಪುರದಲ್ಲಿ ಆರಂಭವಾದಂತಹ ರುಡ್‌ಸೆಟ್ ಸಂಸ್ಥೆ ಸಾವಿರಾರು ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಅವರನ್ನು ಒಬ್ಬ ಯಶಸ್ವಿ ಉದ್ಯಮದಾರರನ್ನಾಗಿ ಹೊರಹೊಮ್ಮಿಸುವಲ್ಲಿ ಈ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ ಎಂದರು.

ಧರ್ಮಸ್ಥಳ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಗ್ರಾಮೀಣ ಯುವಕ ಯುವತಿಯರಿಗೆ ಆಸಕ್ತ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದು ಬಹಳ ಹೆಮ್ಮೆಯಾಗುತ್ತದೆ ಎಂದರು. ಈ ಸಂಸ್ಥೆ ಉತ್ತಮ ಗುಣಮಟ್ಟದ ತರಬೇತಿಗಳನ್ನು ನೀಡುವುದರ ಜೊತೆ ಅವರ ವ್ಯಕ್ತಿತ್ವದಲ್ಲಿ ಗುಣಾತ್ಮಕ ಬದಲಾವಣೆ ತರುತ್ತಿದೆ ಎಂದರು.
ವಿಜಯಪುರ ಜಿಲ್ಲೆಯ ಅಗ್ರಣೀಯ ಬ್ಯಾಂಕಿನ ಪ್ರಬಂಧಕ ನರೇಂದ್ರ ಬಾಬು ಎನ್ ವ್ಹಿ, ಸಂಸ್ಥೆಯ ನಿರ್ದೇಶಕರಾದ ಮತ್ತಣ್ಣ ಧನಗರ, ಸಂಸ್ಥೆಯ ಹಿರಿಯ ಉಪನ್ಯಾಸಕರುಗಳಾದ
ಜಗದೀಶ ಪೂಜಾರ, ಮಲ್ಲಿಕಾರ್ಜುನ ಹತ್ತಿ, ಅತಿಥಿ ಉಪನ್ಯಾಸಕರಾದ ಶಿವಾನಂದ ರಾಠೋಡ, ಚಂದ್ರಕಾಂತ ಪಾಲ್ಗೊಂಡಿದ್ದರು.

Latest Indian news

Popular Stories