ವಿಜಯಪುರ : ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿಯ ವಿಚಾರವಾಗಿ ಸಚಿವರ ನಡುವೆ ಟಾಕ್ ವಾರ್ ಮುಂದುವರೆದಿದ್ದು, ಶಿವಾನಂದ್ ಪಾಟೀಲ್ ಗಿಂತ ನಾನು ಸೀನಿಯರ್ ಎಂದು ಹೇಳಿದ ಎಂಬಿ ಪಾಟೀಲ್ ಹೇಳಿಕೆಗೆ ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದು, ಸಿಎಂ ಆಗುವ ಆಸೆ ನನ್ನ ಕನಸು ಮನಸ್ಸಿನಲ್ಲೂ ಇಲ್ಲ
ಪಕ್ಷದಲ್ಲಿ ಹಿರಿಯರಿದ್ದಾರೆ ಅವರ ಸರದಿ ಆದ ಬಳಿಕ ಎಂಬಿ ಪಾಟೀಲ್ ಸರದಿ ಎಂದು ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಬಿ ಪಾಟೀಲ್ ಸಿಎಂ ಆದರೆ ನನ್ನ ಅಭ್ಯಂತರ ಇಲ್ಲ. ಪಕ್ಷದಲ್ಲಿ ಎಂಬಿ ಪಾಟೀಲ್ ಗಿಂತ ಹಿರಿಯರು ಪಕ್ಷದಲ್ಲಿ ಇದ್ದಾರೆ. ಹಿರಿಯರ ಸರದಿಯ ಬಳಿಕ ಎಂಬಿ ಪಾಟೀಲ್ ಸರದಿ.ಕೆಲವರು ರಾಜಕಾರಣ ಮಾಡುವುದರಲ್ಲಿ ನಿರತರಾಗಿದ್ದು ನಾನು ಕ್ಷೇತ್ರದ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ನಿರತನಾಗಿದ್ದೇನೆ ಮೂರು ಇಲಾಖೆಗಳ ಅಭಿವೃದ್ಧಿ ಕೆಲಸದಲ್ಲಿ ನಿರತನಾಗಿದ್ದೇನೆ ಯಾರು ಬೇಕಾದರೂ ಸಿಎಂ ಆಗಲಿ, ನನ್ನ ಅಭ್ಯಂತರ ಇಲ್ಲ ಎಂದು ತಿಳಿಸಿದರು.
ಸಿಎಂ ಕುರ್ಚಿ ಅಂತೂ ಖಾಲಿ ಇಲ್ಲ. ನಮಗೆ ಗೊತ್ತಿರುವ ಮಟ್ಟಿಗೆ ಮುಡಾ ಹಗರಣದಲ್ಲಿ ಸಿಎಂ ತಪ್ಪಿಲ್ಲ. ಅಕಸ್ಮಾತ್ ಕೋರ್ಟ್ ನಲ್ಲಿ ಸಿಎಂ ವಿರುದ್ಧವೇ ನಿರ್ಣಯ ಆದರೂ ಕೂಡ ಸಿದ್ದರಾಮಯ್ಯ ರಾಜೀನಾಮೆ ಕೊಡಬಹುದು, ಕೊಡದೆ ಇರಬಹುದು. ಈಗ ದೆಹಲಿ ಸಿಎಂ ಕೇಜ್ರಿವಾಲ್ ರಾಜೀನಾಮೆ ಕೊಡದೆ ಆಡಳಿತ ನಡೆಸುತ್ತಿಲ್ಲವೆ? ಹಾಗೆ ಆಡಳಿತ ನಡೆಸಬಹುದು ಎಂದು ಪ್ರಶ್ನಿಸಿದರು.