ಉದ್ಘಾಟನಾ ಭಾಗ್ಯವಿಲ್ಲದ ಬೇಗಂ ತಾಲಾಬ್ ಕೆರೆ, ಉದ್ಯಾನವನ

ಸಮಿ, ವಿಜಯಪುರ

ವಿಜಯಪುರ: ಕೋಟ್ಯಾಂತರ ಹಣ ಖರ್ಚುಮಾಡಿ ಬೇಗಂ ತಾಲಾಬ್ ಕೆರೆ ಅಭಿವೃದ್ಧಿಪಡಿಸಿ ಅದರ ಪಕ್ಕದಲ್ಲಿ ಉದ್ಯಾನವನ ಸಹ ನಿರ್ಮಿಸಲಾಗಿದೆ ಆದರೆ ಉದ್ಯಾನವನ ನಿರ್ಮಾಣಗೊಂಡು ವರ್ಷಗಳೆ ಉರುಳಿದರು ಇದು ವರೆಗೂ ಬೇಗಂ ತಾಲಾಬ್ ಉದ್ಯಾನವನಕ್ಕೆ ಉದ್ಘಾಟನಾ ಭಾಗ್ಯವೇ ಇಲ್ಲದಂತಾಗಿದೆ.

ಐತಿಹಾಸಿಕ ವಿಜಯಪುರ ನಗರದ ಹೊರವಲಯದಲ್ಲಿರುವ 234 ಎಕರೆ ವಿಶಾಲವಾದ ಐತಿಹಾಸಿಕ ಬೇಗಂ ತಾಲಾಬ್ ಕೆರೆಯನನು ಅಭವೃದ್ಧಿ ಮಾಡಿ ಅದರ ಪಕ್ಕದಲ್ಲಿ ಸುಂದರ ಉದ್ಯಾನವನ ಮಾಡಲಾಗಿದೆ. ಆದರೆ ಉದ್ಯಾನವನ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಇನ್ನೂ ವರೆಗೂ ಸಾರ್ವಜನಿಕರ ಪ್ರವೇಶ ನಿರ್ಭಂಧವಿದ್ದು ಇಂದು ಉದ್ಯಾನವನಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡಿದ ವಸ್ತುಗಳೆಲ್ಲವೂ ಮತ್ತೆ ಹಾಳಾಗುತ್ತಿವೆ.
ಐತಿಹಾಸಿಕ ಬೇಗಂ ತಲಾಬ್ ಕೆರೆಗೆ 2018 ರಲ್ಲಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಅಡಿಗಲ್ಲನ್ನು ಹಾಕಿದ್ದರು. ಕೋಟ್ಯಾಂತರ ಹಣ ಖರ್ಚು ಮಾಡಿ 234 ಎಕರೆ ಪ್ರದೇಶದ ಬೇಗಂ ತಲಾಬ್ ಕೆರೆಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡಲಾಗಿತ್ತು. ಇದು ಅಂತರ್ಜಲ್ ವೃದ್ದಿಗೆ ಸಾಕಷ್ಟು ಅನುಕೂಲವಾಗಿತ್ತು. ಬಳಿಕ ಬೇಗಂ ತಲಾಬ್ ಕೆರೆಯ ಪಕ್ಕದಲ್ಲಿ ಸುಮಾರು 11 ಕೋಟಿ ವೆಚ್ಚದಲ್ಲಿ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಪಾರ್ಕ್, ಚಿಲ್ಡ್ರನ್ ಪಾರ್ಕ್, ಪುಟ್ ಪಾತ್, ವಾಕಿಂಗ್ ಟ್ರ್ಯಾಕ್ ಎಲ್ಲವನ್ನು ನಿರ್ಮಾಣ ಮಾಡಲಾಗಿತ್ತು, ಆದರೆ ಇದು ಸಿದ್ದಗೊಂಡು ವರ್ಷಗಳೇ ಕಳೆದರೂ ಇನ್ನೂ ವರೆಗೂ ಬೇಗಂ ತಾಲಾಬ್ ಉದ್ಯಾನವನಕ್ಕೆ ಉದ್ಘಾಟನೆ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.

ಸಣ್ಣ ನೀರಾವರಿ ಹಾಗೂ ಕೆ ಬಿ ಜೆ ಎನ್ ಎಲ್ ವತಿಯಿಂದ ಈ ಕೆರೆಯ ಅಭಿವೃದ್ಧಿ ಮಾಡಲಾಗಿತ್ತು. ಕೋಟ್ಯಾಂತರ ಹಣ ಖರ್ಚು ಮಾಡಿ ಎಲ್ಲವೂ ಸಿದ್ದಗೊಂಡರೂ ಇನ್ನೂ ವರೆಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂದ ಇದೆ. ಇದಕ್ಕೆ ಕಾರಣ, ಉದ್ಯಾನವನ ಉಸ್ತುವಾರಿಯನ್ನು ಇತ್ತ ಕೆಬಿಜೆಎನ್ಎಲ್ ನಅಧಿಕಾರಿಗಳು ನೋಡಿಕೊಳ್ಳುತ್ತಿಲ್ಲ, ಇತ್ತ ಮಹಾನಗರ ಪಾಲಿಕೆಗೂ ಹಸ್ತಾಂತರ ಆಗಿಲ್ಲ, ಇದರಿಂದಾಗಿ ಸುಮಾರು 11 ಕೋಟಿ ಖರ್ಚು ಮಾಡಿ ನಿರ್ಮಾಣಮಾಡಿದ ಉದ್ಯಾನವನ ಮತ್ತೆ ಈಗ ಹಾಳಾಗಿ ಹೋಗುತ್ತಿದೆ.

ಉದ್ಯಾನವನಕ್ಕೆ ಅಡಿಗಲ್ಲನ್ನು ಸಿಎಂ ಸಿದ್ದರಾಮಯ್ಯನವರು ಅಂದು ಇಟ್ಟಿದ್ದರು, ಅದರಂತೆಯೆ ಇಂದು ಅಭಿವೃದ್ಧಿಯಾಗಿ ಸಿದ್ಧವಾಗಿರುವ ಬೇಗಂ ತಾಲಾಬ್ ಕೆರೆ ಹಾಗೂ ಉದ್ಯಾನವನವನ್ನು ಆದಷ್ಟು ಶೀಗ್ರದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

IMG 20240125 WA0049 Vijayapura

IMG 20240125 WA0048 Vijayapura

Latest Indian news

Popular Stories