ಸ್ವಯಂಚಾಲಿತ ಕಬ್ಬುನಾಟಿ ಮಾಡುವ ಯಂತ್ರದ ಅವಿಷ್ಕಾರಕ್ಕೆ ಇಂಡಿಯನ್ ಪೇಟೆಂಟ್

ವಿಜಯಪುರ : ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಪ್ರಧ್ಯಾಪಕ ಡಾ.ಸಮೀರ ಎಸ್. ಕುಲಕರ್ಣಿಯವರು ಹಾಗೂ ತಂಡದವರು ಆವಿಷ್ಕಾರ ಮಾಡಿದ `ಸ್ವಯಂಚಾಲಿತ ಕಬ್ಬುನಾಟಿ ಮಾಡುವ ಯಂತ್ರ’ಕ್ಕೆ ಭಾರತ ಸರ್ಕಾರದ ಪೇಟೆಂಟ್ ಕಾರ್ಯಾಲಯವು (ಬೌದ್ಧಿಕ ಆಸ್ತಿ ಸ್ವಾಮ್ಯ ಪ್ರಮಾಣ ಪತ್ರ) ಪೇಟೆಂಟ್ ದೊರಕಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿ.ಜಿ.ಸಂಗಮ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಯಂತ್ರಗಳು ಹೆಚ್ಚು ಖರ್ಚಿನೊಂದಿಗೆ ರೂ.8500ರ ವರೆಗೆ ಲಭ್ಯ ಇರುತ್ತದೆ. ಆದರೆ ನೂತನವಾಗಿ ಆವಿಷ್ಕಾರಗೊಳಿಸಿದ ಕಬ್ಬು ನಾಟಿ ಮಾಡುವ ಯಂತ್ರ ಕೇವಲ ರೂ.3500 ಖರ್ಚಿನಲ್ಲಿ ಇಬ್ಬರು ಕೆಲಸಗಾರರ ಸಹಾಯದಿಂದ ಒಂದು ಎಕರೆ ಜಮೀನಿನಲ್ಲಿ ಎರಡುವರೆ ತಾಸಿನಲ್ಲಿ ಸ್ವಯಂ ಚಾಲಿತವಾಗಿ ಕಬ್ಬು ಕಟಾವು ಮಾಡಿ 3ಅಡಿ, 4ಅಡಿ, 5ಅಡಿ ಅಳತೆಗಳಿಗೆ ಹೊಂದಾಣಿಕೆಯಾಗುವಂತೆ ಸಾಲು ಕೊರೆದು ಕಬ್ಬುನಾಟಿ ಮಾಡಿ ಬೋದ ಏರಿಸುವ ಕೆಲಸವನ್ನು ಮಾಡುತ್ತದೆ. ಈ ನೂತನ ಕೃಷಿ ಪರಿಕರ ಕಬ್ಬು ಬೆಳೆಯುವ ರೈತರಿಗೆ ವರದಾನ ಆಗಿಲಿವೆ. ಕಡಿಮೆ ಖರ್ಚಿನಲ್ಲಿ ನಾಟಿಮಾಡಲು ಸಾಧ್ಯವಾಗಲಿವೆ.

ಬಿ.ಎಲ್.ಡಿ.ಇ ತಾಂತ್ರಿಕ ಮಹಾವಿದ್ಯಾಲಯವು ಸಮಾಜಮುಖಿಯಾದ ಕೆಲಸಗಳನ್ನು ಕೈಗತ್ತಿಗೊಂಡು ತಂತ್ರಜ್ಞಾನವನ್ನು ಸರಳ ರೀತಿಯಲ್ಲಿ ವರ್ಗಾವಣೆ ಮಾಡಿ ನಾಡಿನ ರೈತರಿಗೆ ಸಹಾಯ ಮಾಡಲಿವೆ. ಭವಿಷ್ಯದಲ್ಲಿ ಈ ಯಂತ್ರವು ಸ್ಪರ್ದಾತ್ಮಕ ಬೆಲೆಯಲ್ಲಿ ಸಿಗಬಹುದು. ಹೆಚ್ಚಿನ ಮಾಹಿತಗಾಗಿ ಪ್ರೊ.ಸಮೀರ ಕುಲಕರ್ಣಿ 9448972991 ಸಂಪರ್ಕಿಸಬಹುದಾಗಿದೆ.

Latest Indian news

Popular Stories