ಲೋಕಸಭೆ ಚುನಾವಣೆ: ವಿಜಯಪುರದಲ್ಲಿ ರೂ. 2.93 ಕೋಟಿ ಹಣ ಜಪ್ತಿ

ವಿಜಯಪುರ: ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟ ಮಾಡಲಾದ ದಿನದಿಂದ ಚುನಾವಣೆ ಆಯೋಗ ಅಕ್ರಮ ಹಣ ಸಾಗಾಟ ಮಾಡುವವರ ಮೇಲೆ ಹದ್ದಿನ ಕಣ್ಣು ಇರಿಸಿದ್ದು, ಅದರ ಬೆನ್ನೆಲ್ಲೆ ಸೋಮವಾರ ರಾತ್ರಿ ವಿಜಯಪುರದ ಸಿಂದಗಿ ಬೈಪಾಸ್‌ನಲ್ಲಿ ಹಣ ಜಪ್ತಿ ಮಾಡಿದ್ದಾರೆ.

ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಟೊಯೋಟಾ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 2,93,50,000 ರೂ. ನಗದು ಹಣವನ್ನು ಸಿಇಎನ್ ಕ್ರೈಂ ಪೊಲೀಸರು ಸೋಮವಾರ ರಾತ್ರಿ ವಿಜಯಪುರ ನಗರದ ಸಿಂದಗಿ ಬೈಪಾಸ್‌ನಲ್ಲಿ ವಶಪಡಿಸಿಕೊಂಡಿದ್ದಾರೆ. ಹಣವನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ‌ ಮಾಹಿತಿ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ಕುಮಾರ್ ನಂದೇಶ್ವರ ಮತ್ತು ಸಿಬ್ಬಂದಿ ನಗರದ ಸಿಂದಗಿ ಬೈಪಾಸ್ ನಲ್ಲಿ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಿದಾಗ ನಗದು ಪತ್ತೆಯಾಗಿದೆ.

ಮಹಾರಾಷ್ಟ್ರ ನೋಂದಾಣಿ ಇರುವ ಎಂ.ಎಚ್.01 ಸಿಡಿ 7537 ಸಂಖ್ಯೆಯ ಟೊಯೋಟಾ ಕಾರಿನಲ್ಲಿ ಸಾಂಗಲಿಯ ಬಾಲಾಜಿ ನಿಕ್ಕಂ ಮತ್ತು ಸಚಿನ್ ಮೋಹಿತೆ ಎಂಬುವವರು ಹಣವನ್ನು ಸಾಗಿಸುತ್ತಿದ್ದರು. ಆದರೆ ಪೊಲೀಸರು ವಿಚಾರಣೆ ವೇಳೆ ಕೊಂಡೊಯ್ಯಲಾಗುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ, ಸಮರ್ಪಕ ಉತ್ತರ ನೀಡದ ಕಾರಣ ಹಣವನ್ನು ಹಾಗೂ ಕಾರನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Latest Indian news

Popular Stories