ಕಾಂಗ್ರೆಸ್‌ ಪಕ್ಷದಲ್ಲಿ ಸಂಸ್ಕಾರವಿಲ್ಲ: ನಿವೃತ್ತ ಡಿವೈಎಸ್‌ಪಿ ಸಂಗಪ್ಪ ಹುಣಸಿಕಟ್ಟಿ

ವಿಜಯಪುರ: ಲೋಕಸಭೆ ಮೀಸಲು ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದನ್ನು ಹಿಂಪಡೆದುಕೊಂಡಿದ್ದು, ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ ಎಂದು ನಿವೃತ್ತ ಡಿವೈಎಸ್‌ಪಿ ಸಂಗಪ್ಪ ಯಮನಪ್ಪ ಹುಣಸಿಕಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಮಾಡಿರುವ ಕೆಲಸಗಳಿಂದಾಗಿ, ಮತ್ತೇ ದೇಶದಲ್ಲಿ ಮೋದಿ ಪ್ರಧಾನಿಯಾಗಬೇಕು ಎನ್ನುವ ಅಭಿಲಾಷೆಯಿಂದ ನಾನು ನಾಮಪತ್ರ ಹಿಂಪಡೆದುಕೊಂಡಿದ್ದೇನೆ ಎಂದರು. 

ಕಾಂಗ್ರೆಸ್‌ ಪಕ್ಷದಲ್ಲಿ ಸಂಸ್ಕಾರವಿಲ್ಲ, ಎಲ್ಲರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಕಾಂಗ್ರೆಸ್‌ ಹಳೆಯ ಮುಖ್ಯಮಂತ್ರಿಗಳ ಮಾತುಗಳು ಮುತ್ತುಗಳಾಗಿದ್ದವೂ, ಆದರೇ ಇಂದಿನ ಮುಖ್ಯಮಂತ್ರಿಗಳು ಮಾತುಗಳು ದುರಹಂಕಾರದಿಂದ ಕೂಡಿರುತ್ತದೆ ಎಂದು ಟೀಕಿಸಿದರು. 

ಸಧ್ಯ ಕಾಂಗ್ರೆಸ್‌ ನಾಯಕರು ಎಲ್ಲೆಡೆ ಡಾ.ಅಂಬೇಡ್ಕರ್‌ ಅವರನ್ನು ಕೊಂಡಾಗುತ್ತಿದೆ, ಆದರೇ ಅಂದು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದರು, ಅವರ ನಿಧನದ ಸಮಯದಲ್ಲಿ ಶವಸಂಸ್ಕಾರಕ್ಕೂ ಯಾವ ಕಾಂಗ್ರೆಸ್‌ ನಾಯಕರು ಬರಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಹಣಮಂತ ಬಿರಾದಾರ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ, ಆದರೇ ಎಂದು ಅವರ ಜಾತಿ ರಾಜಕಾರಣ ಮಾಡಿಲ್ಲ, ಎಲ್ಲ ಸಮುದಾಯ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಶ್ರಮಿಸಿದ್ದಾರೆ ಎಂದರು.

Latest Indian news

Popular Stories