ಪರವಾನಿಗೆ ಪಡೆದ ಶಸ್ತಾಸ್ತ್ರ ಗಳ ಠೇವಣಿಗೆ ಆದೇಶ

ವಿಜಯಪುರ: ಸಾರ್ವತ್ರಿಕ ಲೋಕಸಭೆ ಚುನಾವಣೆ ಪ್ರಯುಕ್ತ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಪಡೆದಂತಹ ಪರವಾನಿಗೆ ಪಡೆದ ಶಸ್ತಾಸ್ತ್ರಗಳ ಠೇವಣಿ ಕುರಿತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ.

ಸಾರ್ವಜನಿಕರು ಪರವಾನಿಗೆ ಪಡೆದ ಶಸ್ತ್ರಾಸ್ತಗಳ ಠೇವಣಿಯಿಂದ ವಿನಾಯತಿ ಪಡೆಯ ಬಯಸುವವರು ಮಾ.25 ಒಳಗಾಗಿ ತಮ್ಮ ಮನವಿಗಳನ್ನು ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಸ್ವಿಕೃತವಾದ ಮನವಿಗಳನ್ನು ಸ್ಕ್ರೀನಿಂಗ್ ಯಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories