ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಜಿಲ್ಲೆಯ ಅಲಿಯಾಬಾದ, ಗುಣಕಿ, ತಿಡಗುಂದಿ, ಮಕಣಾಪುರ ಹಾಗೂ ಅರಕೇರಿ ಗ್ರಾಮಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.
ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ “ಸಂವಿಧಾನ ಜಾಗೃತಿ ಜಾಥಾ” ರಾಜ್ಯಾಧ್ಯಾಂತ ಹಮ್ಮಿಕೊಂಡಿದ್ದು, ಅದರಂತೆ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾದ ರಥವು ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು.
ಸದರಿ ಗ್ರಾಮ ಪಂಚಾಯತಿಗಳ ಆವರಣದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಸೇರಿ ಅತ್ಯಂತ ವಿಜೃಂಬಣೆಯಿಂದ “ಸಂವಿಧಾನ ಜಾಗೃತಿ ಜಾಥಾ”ದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಸಿ. ಮ್ಯಾಗೇರಿ, ಬಸವರಾಜ ಜಗಳೂರ, ಎಸ್.ಎಂ.ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಮೇತ್ರಿ, ಶ್ರೀಮತಿ ಶಾಂತಾಬಾಯಿ ಲಮಾಣಿ, ಆರ್.ಎಸ್.ಬನಸೋಡೆ, ಬಿ.ಎಸ್.ಬಿದರಿ, ಶ್ರೀಮತಿ ಲಲಿತಾ ಹೊಸಮನಿ, ಎಂ.ಎಸ್.ಮಠ, ಸೇರಿದಂತೆ ಗ್ರಾಮದ ಗಣ್ಯರು, ಮುಖಂಡರು ಭಾಗವಹಿಸಿದ್ದರು.
ಅರಕೇರಿ ಗ್ರಾಮ ಪಂಚಾಯತಿಯಲ್ಲಿ ಸ್ವಾಗತ: ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಜಿಲ್ಲೆಯ ಅರಕೇರಿ ಗ್ರಾಮ ಪಂಚಾಯತಿ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಾಗೃತ ಜಾಥಾದ ರಥವು ಜಾಲಗೇರಿ, ಲೋಹಗಾಂವ, ಸಿದ್ದಾಪುರ ಕೆ. ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಎಸ್.ಎಂ.ಪಾಟೀಲ, ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಇಂಡಿ ಉಪವಿಭಾಗದ ತೆನ್ನಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸ್ವಾಗತ: “ಸಂವಿಧಾನ ಜಾಗೃತಿ ಜಾಥಾ” ರಾಜ್ಯಾಧ್ಯಾಂತ ಹಮ್ಮಿಕೊಂಡಿದ್ದು, ಅದರಂತೆ ವಿಜಯಪುರ ಜಿಲ್ಲೆಯಲ್ಲಿ ಇಂಡಿ ಉಪವಿಭಾಗದ ತೆನ್ನಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ನಂತರ ಶಿರಶ್ಯಾಡ, ಸಂಗೋಗಿ, ಸಂಜೆ ಮಸಳಿ ಬಿ ಕೆ ಗ್ರಾಮಕ್ಕೆ ಬಂದು ಗ್ರಾಮ ಪಂಚಾಯತಿಯ ವತಿಯಿಂದ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧ ಚಿತ್ರವನ್ನು ಅತ್ಯಂತ ವಿಜೃಂಭಣೆಯಿಂದ ಸ್ವಾಗತ ಮಾಡಿಕೊಂಡು, ಕಾರ್ಯಕ್ರಮ ನೇರವೇರಿಸಲಾಯಿತು.
ಸದರಿ ಗ್ರಾಮ ಪಂಚಾಯತಿಗಳ ಆವರಣದಲ್ಲಿ ಕಾರ್ಯಕ್ರಮವನ್ನು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಸೇರಿ ಅತ್ಯಂತ ವಿಜೃಂಬಣೆಯಿಂದ “ಸಂವಿಧಾನ ಜಾಗೃತಿ ಜಾಥಾ” ಕುರಿತು ವಿಶ್ಲೇಸಿ ಉಪನ್ಯಾಸ ನೀಡಲಾಯಿತು. ಸಂವಿಧಾನದ ಕುರಿತು ಸಭೆಯಲ್ಲಿ ಭಾಗವಹಿಸಿದ ಗಣ್ಯರು ಮಾತನಾಡಿದರು. ಎಲ್ಲಾ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ ಅಧೀಕ್ಷಕ ಚನ್ನಲಿಂಗಪ್ಪ ಚೌದರಿ, ಸೇರಿದಂತೆ ಗ್ರಾಮದ ಗಣ್ಯರು, ಮುಖಂಡರು ಭಾಗವಹಿಸಿದ್ದರು. ಯಶಸ್ವಿಯಾಗಿ ಗ್ರಾಮಸ್ಥರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲಾಯಿತು.
ಇಂಡಿ ಉಪವಿಭಾಗದ ಟಕ್ಕಳಕಿ ಗ್ರಾಮ ಪಂಚಾಯತಿಯಲ್ಲಿ ಸ್ವಾಗತ: ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾ ರಾಜ್ಯಾಧ್ಯಾಂತ ಹಮ್ಮಿಕೊಂಡಿದ್ದು, ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ಉಪವಿಭಾಗದ ಟಕ್ಕಳಕಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.
ನಂತರ ಘೋಣಸಗಿ, ಕನಮಡಿ, ಸಂಜೆ ಬಿಜ್ಜರಗಿ ಗ್ರಾಮಕ್ಕೆ ಬಂದು ಗ್ರಾಮ ಪಂಚಾಯತಿ ವತಿಯಿಂದ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರವನ್ನು ಅತ್ಯಂತ ವಿಜೃಂಭಣೆಯಿಂದ ಸ್ವಾಗತ ಮಾಡಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಎಸ್.ಎಂ.ಪಾಟೀಲ, ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.