ಟಾಂಗಾ ಸವಾರಿ ಮೂಲಕ ಪಾಲಿಕೆ ಸಾಮಾನ್ಯ ಸಭೆಗೆ ಬಂದ ಮೇಯರ್

ವಿಜಯಪುರ: ಹಳೆಯ ವಾಹನ ನೀಡಿದ್ದಕ್ಕೆ ಹಾಗೂ ವಾಹನ ಚಾಲಕ ನೇಮಕ ಮಾಡದ ಕಾರಣ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮೆಹಜಬೀನ್ ಹೋರ್ತಿ ಅವರು ಟಾಂಗಾ ಸವಾರಿ ಮೂಲಕ ಸಭೆಗೆ ಆಗಮಿಸಿದರು.

ಇಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಮೇಯರ್ ಮಹೆಜಬೀನ ಹೋರ್ತಿ ಅವರು ಟಾಂಗಾ ಸವಾರಿ ಮೂಲಕ ಸಭೆಗೆ ಆಗಮಿಸಿ ಹಳೆಯ ವಾಹನ ನೀಡಿದ್ದಕ್ಕೆ ಹಾಗೂ ಚಾಲಕನ ನೇಮಕ ಮಾಡದಿದ್ದಕ್ಕೆ ಆಕ್ರೋಶ ಹೊರಹಾಕಿದರು.

ಇನ್ನು ಈ ಬಗ್ಗೆ ಮಾತನಾಡಿದ ಮೇಯರ್, ಪಾಲಿಕೆಯಿಂದ ಹಳೆಯ ವಾಹನ ನೀಡಲಾಗಿದೆ. ಚಾಲಕನನ್ನೂ ನೀಡಿಲ್ಲ. ಹಳೆಯ ವಾಹನದಲ್ಲಿ ಓಡಾಡಲು ಆಗುತ್ತಿಲ್ಲ. ಚಾಲಕನೂ ಇಲ್ಲದೇ ಹೇಗೆ ಉಪಯೋಗಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮದೇ ಸರ್ಕಾರವಿದ್ದರೂ ಪಾಲಿಕೆ ಮೇಯರ್ ರನ್ನು ಉದಾಸೀನ ಮಾಡಲಾಗುತ್ತಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದರೂ ಸ್ಪಂಧಿಸಿಲ್ಲ ಎಂದು ಮೇಯರ್ ಮೆಹಜಬೀನ್ ಹೋರ್ತಿ ಆರೋಪಿಸಿದ್ದಾರೆ.

ಇನ್ನು ಟಾಂಗಾ ಮೂಲಕ ಆಗಮಿಸಿ ಪಾಲಿಕೆಯ ಸಾಮಾನ್ಯ ಸಭೆಗೆ ಹಾಜರಾದ ಮೇಯರ್ ನಡೆಗೆ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಪಾಲಿಕೆಯ ನಿಮಯದಂತೆ ನೂತನ ವಾಹನ ಖರೀದಿ ಮಾಡಲು, ಬಾಡಿಗೆ ವಾಹನ ಪಡೆಯಲು ಅವಕಾಶವಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Latest Indian news

Popular Stories