VIJAYAPURA | ಆ.5ರಂದು ದ್ರಾಕ್ಷಿ ಬೆಳೆಗಾರರ ಚಿಂತನಾ ಸಭೆ

ವಿಜಯಪುರ : ಇದೇ ಆಗಷ್ಟ್ 5 ರಂದು ಶನಿವಾರ ದ್ರಾಕ್ಷಿ ಬೆಳಗಾರರ ಚಿಂತನಾ ಸಭೆ ನಡೆಯಲಿದ್ದು, ರೈತರ ಸಮಸ್ಯೆಗಳು ಹಾಗೂ ಸರ್ಕಾರದ ನೆರವು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆನಡೆಯಲಿದೆ ಎಂದು ಕರಬಂಟನಾಳದ ಗುರುಗಂಗಾಧರ ಮಠದ ಧರ್ಮಾಧಿಕಾರಿಗಳಾದ ಶ್ರೀ ಶಿವಕುಮಾರ ಸ್ವಾಮಿಜಿಗಳು ಹೇಳಿದರು.
ನಗರದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ವಿಜಯಪು, ಬಾಗಲಕೋಟ, ಕೊಪ್ಪಳ, ಬೇಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ಮಠಾಧೀಶರ ನೇತೃತ್ವದಲ್ಲಿ ಆಗಸ್ಟ 1 ರಂದು ದ್ರಾಕ್ಷಿ ಬೆಳೆಗಾರರ ಚಿಂತನಾ ಸಭೆ ಹಮ್ಮಿಕೊಳ್ಳಲಾಗಿದೆ. ಅಂದು ದ್ರಾಕ್ಷಿ ಬೆಳೆಯುವ ಎಲ್ಲ ರೈತರು ಹಾಗೂ ಉತ್ತರ ಕರ್ನಾಟಕದ ಮಠಾಧೀಶರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಬಾರಿ ಅತೀ ಹೆಚ್ಚು ಇಳುವರಿಯಿಂದ ರೈತರು ದ್ರಾಕ್ಷಿ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಒಣ ದ್ರಾಕ್ಷಿ ದರ ಕುಸಿತ ಕಂಡಿದ್ದು ಬೆಳೆಗಾರರಲ್ಲಿ ಆತಂಕ ಉಂಟಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.


ಈಗಾಗಲೇ 80 ಕ್ಕೂ ಹೆಚ್ಚು ಶಾಸಕರಿಗೆ ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮ ಜಿಲ್ಲೆಯ ಸಚಿವರಿಗೂ ಮನವಿ ಮಾಡಿಕೊಂಡಿದ್ದೇವೆ ನಮ್ಮ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಸಭೆಯಲ್ಲಿ ರೈತರ ಸಮಸ್ಯೆಗಳು, ಸಬ್ಸಿಡಿ ದರದಲ್ಲಿ ಔಷಧಿ ವಿತರಣೆ, ಮಾರುಕಟ್ಟೆ ಸಮಸ್ಯೆಗಳು, ಆನ್ಲೈನ್ ಮಾರ್ಕೆಟಿಂಗ್ ಸಾಧ್ಯತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗುತ್ತದೆ. ಎಲ್ಲ ರೈತರು ದ್ರಾಕ್ಷಿ ಬೆಳೆಗಾರರ ಚಿಂತನಾ ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಠಾಧೀಶರಾದ ಜೈ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ, ಚಿಮ್ಮಲಗಿಯ ಸಿದ್ಧರೇಣುಕಾ ಶಿವಾಚಾರ್ಯ ಸ್ವಾಮಿಜಿ, ಶಿವಪ್ರಕಾಶ ಸ್ವಾಮೀಜಿ, ಸಂಗನಗೌಡ ಚಿಕ್ಕೊಂಡ, ವಿರೇಶ ಗಬ್ಬೂರ, ಅರವಿಂದ ಕುಲಕರ್ಣಿ, ಸಿದ್ದು ಮಲ್ಲಿಕಾರ್ಜುನಮಠ ಉಪಸ್ಥಿತರಿದ್ದರು.

Latest Indian news

Popular Stories