ವಿಜಯಪುರ: ಯುವ ದಂಪತಿ ನೇಣಿಗೆ ಶರಣು

ವಿಜಯಪುರ : ಕೆಲವು ವರ್ಷಗಳ ಹಿಂದಷ್ಟೇ ಹೊಸ ಕನುಸಗಳನ್ನು ಕಟ್ಟಿಕೊಂಡು ಪ್ರೀತಿಸಿ ಹಸೆಮಣೆ ಏರಿದ್ದ ದಂಪತಿಗಳು ಮನನೊಂದು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಮನೋಜಕುಮಾರ ಫೋಳ (39), ರಾಖಿ (23) ಎಂದು ಗುರುತಿಸಲಾಗಿದೆ. ವಿಜಯಪುರ ನಗರದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿರುವ ಮನೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಶವ ಪತ್ತೆಯಾಗಿವೆ. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಈ ದಂಪತಿ ಪ್ರೀತಿಸಿ ಮದುವೆಯಾಗಿದ್ದರು, ಮಕ್ಕಳು ಆಗದೇ ಇರುವ ಕೊರಗು ಅವರನ್ನು ಕಾಡುತ್ತಿತ್ತು ಎನ್ನಲಾಗಿದ್ದು, ಇದೇ ವಿಷಯವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.

Latest Indian news

Popular Stories