VIJAYAPURA | ಏರ್‌ಪೋರ್ಟ್ ಕ್ರೆಡಿಟ್ ನನಗೆ ಸಲ್ಲಬೇಕು: ಸಂಸದ ಜಿಗಜಿಣಗಿ

ವಿಜಯಪುರ: ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕ್ರೆಡಿಟ್ ನನಗೆ ಸಲ್ಲಬೇಕು, ಅದರಲ್ಲಿ ಎರಡು ಮಾತಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಹಲವಾರು ಬಾರಿ ಪತ್ರ ಬರೆದು ಅನುದಾನ ತಂದವನು ನಾನು, ಹೀಗಾಗಿ ವಿಜಯಪುರದಲ್ಲಿ ವಿಮಾನ ನಿಲ್ದಾಣದ ಕ್ರೆಡಿಟ್ ನನಗೆ ಸಲ್ಲಬೇಕು ಎಂದರು.

ಇನ್ನು ಕಳೆದ 9 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಸ್ತೆ ಕ್ರಾಂತಿಯನ್ನೇ ಮಾಡಲಾಗಿದ್ದು, ಒಟ್ಟು 1514.71 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು, 4025.86 ಕೋಟಿ ರೂ. ಖರ್ಚು ಮಾಡಲಾಗಿದೆ.

ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಸುಸಜ್ಜಿತವಾಗಿ ರಸ್ತೆ ನಿರ್ಮಾಣಗೊಂಡಿರುವುದುರಿಂದ ಸೊಲ್ಲಾಪೂರ ಹಾಗೂ ಮುಂಬಯಿ ಪ್ರಯಾಣಕ್ಕೆ ಸುಗಮ ಸಂಚಾರ ಸಾಧ್ಯವಾಗಿದ್ದು, ಒಟ್ಟು ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯ 110 ಕಿ.ಮೀ. ಕಾಮಗಾರಿಯನ್ನು 1576 ಕೋಟಿ ರೂ. ವೆಚ್ಚವಾಗಿದೆ ಎಂದರು.

ಅದೇ ತೆರನಾಗಿ ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗ ಕಾಮಗಾರಿಗಳಿಗಾಗಿ 460 ಕೋಟಿ ರೂ. ವ್ಯಯಿಸಲಾಗಿದ್ದು, 810 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ, ವಿಜಯಪುರ ಸೇವಾಲಾಲ ನಗರ (ಮಹಲ್)ದಿಂದ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದವರೆಗೆ 80 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 190 ಕೋಟಿ ರೂ. ಖರ್ಚಾಗಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 218 ಕಿ.ಮೀ. ಕೊಲಾರದವರೆಗೆ ವಿಜಯಪುರ-ಹುಬ್ಬಳ್ಳಿ ರಸ್ತೆಯನ್ನು ಪೆವಡ್ ಶೋಲ್ಡ್ ಜೊತೆಗೆ ದ್ವಿಪಥಕ್ಕೆ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, 291 ಕೋಟಿ ರೂ. ಖರ್ಚು ಮಾಡಲಾಗುವುದು ಎಂದರು.

ವಿಜಯಪುರ ಪ್ರವಾಸಿ ಮಂದಿರ ವೃತ್ತದಿಂದ ತೆಲಸಂಗ ಕ್ರಾಸ್‌ವರೆಗೆ 39 ಕಿ.ಮೀ. ರಸ್ತೆ ನಿರ್ಮಾಣಕ್ಕೆ 250 ಕೋಟಿ ರೂ., ಸಿದ್ಧಾಪೂರ-ಅರಕೇರಿ ವಿಜಯಪುರವರೆಗೆ 90.31 ಕೋಟಿ ರೂ. ವೆಚ್ಚದಲ್ಲಿ 11.627 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

957.09 ಕೋಟಿ ರೂ. ವೆಚ್ಚದಲ್ಲಿ ಮಣ್ಣೂರ, ಹಿರೇಬೇವನೂರ, ಇಂಡಿ, ರೂಗಿ, ನಾಗಠಾಣ ಅಲಿಯಬಾದ ರೈಲ್ವೇ ಮ್ಸಲೆತುವೆ ವಿಜಯಪುರ ಪಟ್ಟಣದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರವರೆಗೆ 102.31 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಪಿಎಂ ಗ್ರಾಮ ಸಡಕ್ ಅಡಿ 82 ಕಾಮಗಾರಿ:
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿಯೂ ಹಲವಾರು ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು 82 ಕಾಮಗಾರಿಗಳನ್ನು ಈ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದ್ದು, 159.17 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೋಳಲಾಗುತ್ತಿದೆ, ಕಳೆದ ಒಂದು ವರ್ಷದ ಅವಧಿಯಲ್ಲಿ 91.13 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು 2716.56 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.

ಕೇಂದ್ರ ರಸ್ತೆ ನಿಧೀ ಯೋಜನೆಯಡಿಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಲ್ಲಿ ಕಳೇದ 2016-17 ನೇ ವರ್ಷದಿಂದ ಇಲ್ಲಿಯವರೆಎ 14 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು ಆ ಪೈಕಿ 12 ಕಾಮಗಾರಿಗಳು ಪೂರ್ಣಗೊಂಡಿವೆ, ಒಟ್ಟು ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ 213.70 ಕೋಟಿ ರೂ. ಅನುದಾನಕ್ಕೆ ತಾತ್ವಿಕ ಒಪ್ಪಿಗೆ ದೊರಕಿದೆ ಎಂದರು.

ವಿಜಯಪುರ-ಸೊಲ್ಲಾಪೂರ ಸಿಕ್ಸ್ ಲೇನ್:
ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪ್ರಗತಿಯಿಂದ ದೊಡ್ಡಮಟ್ಟದ ಅನುಕೂಲವಾಗಿದೆ, ಈ ಕಾರಣಕ್ಕಾಗಿಯೇ ಪ್ರಸ್ತುತ ಚತುಷ್ಪಥ ಮಾರ್ಗವಾಗಿರುವ ಈ ರಸ್ತೆಯನ್ನು ಷಷ್ಠ ಮಾರ್ಗ (ಸಿಕ್ಸ್ ಲೇನ್) ಮಾರ್ಪಾಡು ಮಾಡಲು ಸಹ ಮಂಜೂರಾತಿ ಸಹ ದೊರಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ವಿವರಿಸಿದರು.

ಬಿಜೆಪಿ ಮುಖಂಡರಾದ ಪಾಪುಸಿಂಗ್ ರಜಪೂತ, ಸಂಗಮೇಶ ಉಕ್ಕಲಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories