ವಿಜಯಪುರ: ಬಾರ್ನಲ್ಲಿರುವ ನಾಯಿ ಕದ್ದ ವ್ಯಕ್ತಿಯನ್ನು ನಾಯಿಯ ಪಂಜರದಲ್ಲಿ ಇಟ್ಟಿರುವ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್ ಎದುರು ನಡೆದಿದೆ.
ಸೋಮು ಎಂಬಾತನನ್ನು ಕೆಲಕಾಲ ನಾಯಿ ಇಡುವ ಪಂಜರದಲ್ಲಿ ಇಟ್ಟಿದ್ದಾರೆ. ಬಾರ ಎದುರುಗೆ ಇದ್ದ ಲಾಬ್ರಡಾರ್ ನಾಯಿಯನ್ನ ಸೋಮು ಕದ್ದೊಯ್ದನ್ನು. ಬಳಿಕ ಸೋಮುನ್ನು ಹುಡುಕಿ ತಂದು ನಾಯಿ ಇರಿಸುವ ಪಂಜರದಲ್ಲಿ ಸಿಬ್ಬಂದಿಗಳು ಇಟ್ಟಿದ್ದಾರೆ.
ಬಾರ್ಗೆ ಬಂದವರಿಂದ ಆಕ್ಷೇಪದ ಬಳಿಕ ಸೋಮುನ್ನು ವಾಪಸ್ ಕಳುಹಿಸಿದ್ದಾರೆ. ವ್ಯಕ್ತಿಯನ್ನು ಅಮಾನುಷವಾಗಿ ನಡೆಸಿಕೊಂಡ ಬಾರ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.