ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರು ಮಕ್ಕಳಿಗೆ ತಂದೆಯೊಬ್ಬ ವಿಷಪ್ರಾಶನ ಮಾಡಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ ನಡೆದಿದ್ದು, ಈ ಘಟನೆಯಿಂದಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ವಿಷ ಹಾಕಿ ತಂದೆ ಹಾಗೂ ಇನ್ನೋರ್ವ ಪುತ್ರ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.
ಶಾಂತಾ ಹಾಗೂ ರಾಯಣ್ಣ ಮೃತ ದುರ್ದೈವಿ ಬಾಲಕರು. ಮೃತ ಬಾಲಕರ ತಂದೆಯನ್ನು ಭೀರಣ್ಣ ಎಂದು ಗುರುತಿಸಲಾಗಿದ್ದು, ತನ್ನ ಮೂವರು ಮಕ್ಕಳಿಗೆ ವಿಷಪ್ರಾಷನ ಮಾಡಿ ತಾನು ಸಹ ವಿಷ ಸೇವನೆ ಮಾಡಿದ್ದಾರೆ, ಘಟನೆಯಿಂದಾಗಿ ಇಬ್ಬರು ಮಕ್ಕಳು ಅಸುನೀಗಿದ್ದು, ಬೀರಣ್ಣ ಹಾಗೂ ಇನ್ನೋರ್ವ ಪುತ್ರ ಸಂಗಮೇಶ ಪ್ರಾಣಾಪಾಯದಿಂದ ಪಾರಗಿದ್ದಾರೆ.
ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಮನನೊಂದ ಭೀರಣ್ಣ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.