ವಿಜಯಪುರ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು

ಸಮಾಜ ಸೇವೆ: ಸ್ವಯಂ ಸೇವಕರಿಗೆ ಸನ್ಮಾನ

IMG 20240607 WA0056 Prime news, Vijayapura

ವಿಜಯಪುರ : ಸಮಾಜಕ್ಕೆ ನಿಜವಾದ ಕೊಡುಗೆ ಸಲ್ಲಿಸಿದಾಗಲೇ ಮನುಷ್ಯತ್ವಕ್ಕೆ ನಿಜಾರ್ಥ ಬರುತ್ತದೆ, ಸೇವೆ ಎಂದರೆ ಮಾನವೀಯತೆ ಎಂದು ಕೆಎಂಡಿಸಿ ವಿಜಯಪುರ ವಿಭಾಗದ ಪ್ರಬಂಧಕ ಎಂ.ಎ. ಶೇಖ ಹೇಳಿದರು.

ನಗರದ ಕೇರಿಂಗ ಸೋಲ್ಸ್ ಇಂಡಿಯಾ ವತಿಯಿಂದ ಸ್ವಯಂ ಸೇವಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು, ಸಮಾಜಕ್ಕಾಗಿ ಮಿಡಿಯುವ ವಿಶೇಷ ಹಂಬಲ ನಮ್ಮೆಲ್ಲರಲ್ಲಿ ಇರಬೇಕು ಎಂದರು.

ಬಿ.ಸಿ.ಎಂ. ಇಲಾಖೆಯ ಅಧೀಕ್ಷಕ ವಿಜಯಕುಮಾರ ಮುದ್ದೇಬಿಹಾಳ ಮಾತನಾಡಿ, ಮಾನವ ಜನ್ಮತಾಳಿದ ಮೇಲೆ ಸಮಾಜಕ್ಕೆ ಕೊಡುಗೆ ನೀಡಿದಾಗ ಜೀವನಕ್ಕೊಂದು ಸಾರ್ಥಕವಾಗುತ್ತದೆ, ಇಂತಹ ಸಮಾಜ ಸೇವಕರಿಗೆ ಗುರುತಿಸಿ ಸನ್ಮಾನಿಸುತ್ತುರುವುದು ಅರ್ಥಪೂರ್ಣ, ಇದರಿಂದ ಉದಯೋನ್ಮುಖ ಸಮಾಜ ಸೇವಕರಿಗೂ ಸ್ಪೂರ್ತಿ ದೊರಕುತ್ತದೆ ಎಂದರು.

ಉದ್ಯಮಿ ಶೌಕತ್ ಕೊತ್ವಾಲ್ ಮಾತನಾಡಿದರು. ನಿಯಾಜ ಬಾಗವಾನ, ಶಫೀಯುಲ್ಲಾ ಸಂಗಾಪೂರ, ಸಮೀರ ಸಿಪಾಯಿ, ಉಮೇರ ಸೌದಾಗರ, ಶೋಯಿಬ ಜತ್, ಅಬ್ಬಾಸ ಕಲಾದಗಿ, ಬಿಲಾಲ ಯಾದಗೀರ, ಜೈದ ತುರ್ಕಿ, ಜುನೇದ ಇನಾಮದಾರ, ಅಬ್ದುಲ್ ಕರೀಮ, ನಿಯಾಜ ಹೆರಕಲ್, ಮುಬಷೀರ್ ಮಹಾಬರಿ, ಖಿಜರಅಹ್ಮದ ರೊಜಿಂದಾರ, ರೋಹಿತ ಗುತ್ತಿಕ್ಕೊಂಡ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಶ್ರೀ ಆಸಿಫ್ ಇಕ್ಬಾಲ ದೊಡ್ಡಮನಿ, ಡಾ.ಅಸ್ಲಂ ಕರಜಗಿ, ಸಂಸ್ಥೆಯ ಉಪಾಧ್ಯಕ್ಷ ಎನ್.ಎಂ. ದೊಡ್ಡಮನಿ, ಬಂದೇನವಾಜ ಲೋಣಿ, ವಿನಾಯಕ ಕುಮಟೆ, ನ್ಯಾಮತ್-ಉಲ್ಲಾ ಪಟೇಲ ಉಪಸ್ಥಿತರಿದ್ದರು.

ನಕಲು ಮುಕ್ತ ಪರೀಕ್ಷೆಗೆ ಕ್ರಮ ವಹಿಸಿ: ಡಿಸಿ

IMG 20240607 WA0055 Prime news, Vijayapura

ವಿಜಯಪುರ : ಎಸ್‌ಎಸ್‌ಎಲ್‌ಸಿ 2 ಪರೀಕ್ಷೆಯನ್ನು ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ನಡೆಸಲು ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್ 14 ರಿಂದ 22ರ ವರೆಗೆ ಜಿಲ್ಲೆಯಲ್ಲಿ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸುಮಾರು 8,060 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕುಡಿಯುವ ಶುದ್ಧ ನೀರು, ಬೆಂಚ್, ಮಧ್ಯಾöಹ್ನ ಬಿಸಿಯೂಟ, ಸಾರಿಗೆ ವ್ಯವಸ್ಥೆ ಹಾಗೂ ವೈಧ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.

ಪರೀಕ್ಷಾ ದಿನಗಳಂದು ಆಯಾ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ತಹಶೀಲ್ಧಾರರು, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ವಿಶೇಷ ವಿಚಕ್ಷಣಾ ದಳದ ಕರ್ತವ್ಯಗಳನ್ನು ತಪ್ಪದೆ ನಿರ್ವಹಿಸಬೇಕು ತಪ್ಪಿದಲ್ಲಿ ಪರೀಕ್ಷಾ ಮಂಡಳಿಯ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸುವುದರೊಂದಿಗೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಸಿಇಓ ರಿಷಿ ಆನಂದ ಮಾತನಾಡಿ, ಪರೀಕ್ಷಾ ದಿನಗಳಂದು ಹೆಸ್ಕಾಂ ಇಲಾಖೆಯು ಸಮರ್ಪಕವಾಗಿ ವಿದ್ಯುತ್ ಪೂರೈಸುವುದರೊಂದಿಗೆ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷಾ ಕೊಠಡಿ ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಸ್ಥ್ಥಾನಿಕ ಜಾಗೃತ ದಳ ಹಾಗೂ ಮೊಬೈಲ್ ಸ್ವಾದೀನ ದಳಗಳ ಅಧಿಕಾರಿಗೆಳು ತಮಗೆ ವಹಿಸಿದ ಕರ್ತವ್ಯಗಳನ್ನು ಕಟ್ಟು ನಿಟ್ಟಿನ ಪಾಲಿಸಬೇಕು. ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ ಕ್ಯಾಮೆರಾ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಕುರಿತು ನಿಗಾ ವಹಿಸಬೇಕು, ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಅದಕ್ಕೆ ಅನುಗುಣವಾಗಿ ವಿದ್ಯುತ್ ತೊಂದರೆಯಾಗದ ರೀತಿ ಜನರೇಟರ್ ಇಲ್ಲವೆ ಯು.ಪಿ.ಎಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯ ಹೊರಗಡೆಯ 200ಮೀ ಅಳತೆಯಲ್ಲಿ ನಿಷೇಧಾಜ್ಞೆ ಜಾರಿಇದ್ದು, ಅದಕ್ಕೆ ಅವಶ್ಯಕವಾದ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲು ಪೋಲಿಸ್ ಅಧಿಕಾರಿಗಳು ಸಹಕಾರ ಕೋರುವಂತೆ ಅವರು ಸೂಚಿಸಿದರು.
ಡಿಡಿಪಿಐ ಉಮಾದೇವಿ ಸೊನ್ನದ, ಪೋಲಿಸ್ ಅಧಿಕಾರಿ ಪರಮೇಶ್ವರ ಕವಟಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಹೆಸ್ಕಾಂ ಅಧಿಕಾರಿಗಳು, ತಾ.ಪಂ. ಇಓಗಳು, ಬಿ.ಇ.ಒ ಗಳು, ಬಿ.ಆರ್.ಸಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇಳಿವಯಸ್ಸಿನಲ್ಲು ಕಲಿಯುವ ಹಂಬಲ: ಪರೀಕ್ಷೆ ಬರೆದ ಹಿರಿಯ ಜೀವಿಗಳು

IMG 20240607 WA0054 Prime news, Vijayapura

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ. ಎಸ್. ಎಸ್. ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಕೇಂದ್ರ ಆಯೋಜಿಸಿರುವ ಎಂ. ಎ. ಇಂಗ್ಲಿಷ್ ಪರೀಕ್ಷೆಗೆ 83 ವರ್ಷ ಮತ್ತು 68 ವರ್ಷದ ಹಿರಿಯರು ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಂಗ್ಲಿಷ್ ಪರೀಕ್ಷೆ ನಡೆಯಿತು. ಈ ವೇಳೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರಿನ 83 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿಯ 68 ವರ್ಷದ ಪಿ. ಎಂ. ಮಡಿವಾಳ ಹಾಗೂ ನಾಲ್ಕೈದು ರ‍್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಎ. ಪಾಟೀಲ ಪರೀಕ್ಷೆ ಬರೆದು ಗಮನ ಸೆಳೆದರು.

ಈ ಪರೀಕ್ಷೆಯ ಕುರಿತು ಪ್ರತಿಕ್ರಿಯೆ ನೀಡಿದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹ- ಪ್ರಾಧ್ಯಾಪಕ ಮತ್ತು ಇಗ್ನೊ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಕೋರಿ ಮಾತನಾಡಿ, ನಮ್ಮ ಬಿ. ಎಲ್. ಡಿ. ಇ ಸಂಸ್ಥೆಯ ಜೆ. ಎಸ್. ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿರುವ ಇಗ್ನೋ ಕೇಂದ್ರದಲ್ಲಿ ಸಾಕಷ್ಟು ಜನ ಹಿರಿಯ ನಾಗರಿಕರು ಪರೀಕ್ಷೆ ಬರೆಯುತ್ತಿದ್ದಾರೆ. ಯುವಕರಿಗೂ ಇವರು ಸ್ಪರ‍್ತಿಯಾಗಿದ್ದಾರೆ. ಇಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿವೆ. ಅತೀ ಕಡಿಮೆ ರ‍್ಚಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ರ‍್ಟಿಫಿಕೆಟ್ ಲಭ್ಯವಿವೆ. ಬಾಹ್ಯ ಪರೀಕ್ಷೆ ಬರೆಯುವವರಿಗೆ ಉತ್ತಮ ವಾತಾವರಣವಿದೆ. 85 ವರ್ಷದ ಹಿರಿಯರು, 65 ವರ್ಷದ ಹಿರಿಯರು, 55 ವರ್ಷದ ಹಿರಿಯರು ಪರೀಕ್ಷೆ ಬರೆದಿದ್ದಾರೆ. ನಿವೃತ್ತ ನೌಕರರು ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಪರೀಕ್ಷೆ ಬರೆಯುತ್ತಿರುವುದು ನನಗೆ ಖುಷಿ ಎನಿಸುತ್ತಿದೆ. ಈಗ ಇಂಗ್ಲಿಷ್ ಪರೀಕ್ಷೆಗೆ 25 ವಿದ್ಯರ್ಥಿಗಳು ಹಾಜರಾಗಿದ್ದಾರೆ ಎಂದು ತಿಳಿಸಿದರು.

ವಿಜಯಪುರ ಇಗ್ನೊ ಪ್ರಾದೇಶಿಕ ಕೇಂದ್ರದ ನರ‍್ದೇಶಕ ಡಾ. ರವಿಕಾಂತ ಕಮಲೇಕರ, ಇಂದು ಪರೀಕ್ಷೆ ಆರಂಭವಾಗಿದ್ದು, ಜುಲೈ 15ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಇಲ್ಲಿ ರ‍್ಟಿಫಿಕೆಟ್ ಕರ‍್ಸ್ ನಿಂದ ಹಿಡಿದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕರ‍್ಸುಗಳು ಲಭ್ಯವಿವೆ. ಹಿರಿಯ ನಾಗರಿಕರೂ ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಉತ್ತರ ರ‍್ನಾಟಕದಲ್ಲಿ ನಾವು 12 ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಎರಡು ಜಿಲ್ಲೆಗಳು ನಮ್ಮ ಇಗ್ನೋ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಉತ್ಸಾಹದಿಂದ ವಿದ್ಯರ‍್ಥಿಗಳು ಪಾಲ್ಗೋಳ್ಳುತ್ತಿರುವುದು ಗಮನರ‍್ಹವಾಗಿದೆ ಎಂದು ತಿಳಿಸಿದರು.

83 ಇಳಿಯ ವಯಸ್ಸಿನಲ್ಲಿ ಪರೀಕ್ಷೆ ಬರೆಯುತ್ತಿರುವ ಕುರಿತು ಮಾತನಾಡಿದ ನಿಂಗಯ್ಯ ಬಸಯ್ಯ ಒಡೆಯರ, ನಾನೊಬ್ಬ ಆರೋಗ್ಯ ಇಲಾಖೆಯ ನಿವೃತ್ತ ನೌಕರ. 2000ನೇ ಇಸವಿಯಲ್ಲಿ ನಿವೃತ್ತಿಯಾಗಿದ್ದೇನೆ. ನಾನು ಬಡತನದಿಂದ ಬಂದಿದ್ದೇನೆ. ಸಾಹಿತ್ಯ ರಚನೆ ಮಾಡಿದ್ದೇನೆ. 15 ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನಗೆ ವಯಸ್ಸಾದರೂ ಆಸಕ್ತಿ ಕಡಿಮೆಯಾಗಿಲ್ಲ. ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ ಆವಾಗ ಅದು ಕಬ್ಬಿಣ ತುಕ್ಕು ಹಿಡಿದಂತಾಗುತ್ತದೆ. ಹೀಗಾಗಿ ಆಗಾಗ, ರ‍್ಚೆ, ಅಧ್ಯಯನ, ಪರೀಕ್ಷೆ, ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡರೆ ಜ್ಞಾಪಕ ಶಕ್ತಿ ಬೆಳೆಯುತ್ತದೆ. ಇದು ನಾನು ಬರೆಯುತ್ತಿರುವ ಐದನೇ ಪರೀಕ್ಷೆಯಾಗಿದೆ. ಈಗಾಗಲೇ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂ. ಎ. ಮಾಡಿದ್ದೇನೆ. 1956ರಲ್ಲಿ ನಾನು ಮೊದಲು ಶಾಲೆಗೆ ಸೇರಿ ಒಂದನೇ ತರಗತಿಯಲ್ಲಿ ಪರೀಕ್ಷೆ ಬರೆದೆ. ಅದೇ ಉತ್ಸಾಹ ಈಗಲೂ ಇದೆ. ಎಂದು ಸಂತಸ ವ್ಯಕ್ತಪಡಿಸಿದರು.

ಸಿಂದಗಿಯ ನಿವೃತ್ತ ಉಪನ್ಯಾಸಕ ಪಿ. ಎಂ. ಮಡಿವಾಳ ಮಾತನಾಡಿ, ಈಗ ನನಗೆ 68 ವರ್ಷ ವಯಸ್ಸಾಗಿದೆ. ನನ್ನ ಮಗಳು ಈ ಮುಂಚೆ ಇಗ್ನೋದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಿದಾಗ ನಾನೂ ಕೂಡ ಅವಳೊಂದಿಗೆ ಅರ್ಜಿ ಹಾಕಿದೆ. ಇಗ್ನೋ ಉತ್ತಮವಾಗಿ ಪರೀಕ್ಷೆ ನಡೆಸುತ್ತಿದ್ದು, ಎಲ್ಲ ಪರೀಕ್ಷರ‍್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ರ‍್ವ ಪ್ರಾಧ್ಯಾಪಕನಾಗಿ ದಿನನಿತ್ಯ ಅಧ್ಯಯನಶೀಲನಾಗಿರಬೇಕು. ಜ್ಞಾನ ಸಂಪಾದನೆ ಮಾಡಬೇಕು. ಹೊಸ ಹೊಸ ಪುಸ್ತಕಗಳನ್ನು ಓದುವುದು, ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡುವುದರಿಂದ ವಿದ್ಯರ‍್ಥಿಗಳಿಗೆ ಉತ್ತಮ ಬೋಧನೆ ಮಾಡಬಹುದು. ನಮ್ಮ ನಾನು, ನಮ್ಮ ಸಂಸ್ಕೃತಿ ಬೆಳೆಯಲು ಇದು ನಾಂದಿಯಾಗುತ್ತಿದೆ. ಎಂದು ಹೇಳಿದರು.
ಪರೀಕ್ಷೆಯ ಬಳಿಕ ಕಾಲೇಜಿನ ಪ್ರಾಚರ‍್ಯೆ ಮತ್ತು ಇಗ್ನೋ ಅಧ್ಯಯನ ಕೇಂದ್ರದ ಮೇಲ್ವಿಚಾರಕಿ ಡಾ. ಭಾರತಿ ವೈ. ಖಾಸನೀಸ್, ಅಧ್ಯಯನ ಕೇಂದ್ರದ ನರ‍್ದೇಶಕ ಡಾ. ರವಿಕಾಂತ ಕಮಲೇಕರ, ಸಂಯೋಜಕ ಡಾ. ಮಂಜುನಾಥ ಕೋರಿ ಅವರು ಹಿರಿಯ ವಯಸ್ಸಿನಲ್ಲಿ ಪರೀಕ್ಷೆ ಬರೆದು ಇತತರಿಗೆ ಮಾದರಿಯಾದ ನಿಂಗಯ್ಯ ಬಸಯ್ಯ ಒಡೆಯರ, ಪಿ. ಎಂ. ಮಡಿವಾಳ ಮತ್ತು ನಾಗನಗೌಡ ಎ ಪಾಟೀಲ ಅವರಿಗೆ ಶುಭಾಷಯ ಕೋರಿದರು.

Latest Indian news

Popular Stories