ಯಾದಗಿರಿ: ಕಚ್ಚಾ ವಸ್ತುಗಳ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೆಂಕಿಯ ಕೆನ್ನಾಲಿಗೆಗೆ ಇಡೀ ಕಾರ್ಖಾನೆ ಹೊತ್ತಿ ಉರಿದಿರುವ ಘಟನೆ ಯಾದಗಿರಿ ಜಿಲ್ಲೆಯ ಬಾಡಿಯಾಲ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಕಚ್ಚಾ ವಸ್ತುಗಳನ್ನು ಕರಗಿಸಿ ಪೌಡರ್ ಮಾಡುತ್ತಿದ್ದ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.ಬೆಂಕಿಯ ತೀವ್ರತೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ. ರಿಯಾಕ್ಟರ್ ಅನ್ ಲೋಡ್ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬಿಸಿಲಿ ಝಳದ ನಡುವೆ ಬೆಂಕಿ ಸುತ್ತಮುತ್ತಲು ವ್ಯಾಪಿಸುತ್ತಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಯಾದು ಪ್ರಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.