ಯಾದಗಿರಿ: ಪ್ರೀತಿ ನಿರಾಕರಿಸಿದ್ದಕ್ಕೆ ಎರಡು ತಿಂಗಳ ಹಸುಗೂಸನ್ನು ಕೊಂದ ಅಪ್ರಾಪ್ತೆ

ಯಾದಗಿರಿ, ಜುಲೈ 08: ಎರಡು ತಿಂಗಳ ಹಸುಗೂಸನ್ನು (2 Months Baby) ಕೊಲೆ ಮಾಡಿದ ಅಪ್ರಾಪ್ತೆಯನ್ನು ಯಾದಗಿರಿ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಯಾದಗಿರಿ (Yadgiri) ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್​, ಚಟ್ಟೆಮ್ಮ ಎಂಬ ದಂಪತಿ ವಾಸವಾಗಿದ್ದಾರೆ. ದಂಪತಿಯ ಮಗು ಮೀನಾಕ್ಷಿ ಮೃತ ಹಸುಗೂಸು. ಕೊಲೆ ಮಾಡಿದ ಅಪ್ರಾಪ್ತೆ ಪಕ್ಕದ ಮನೆಯಲ್ಲೇ ವಾಸವಾಗಿದ್ದಳು. ಅಪ್ರಾಪ್ತೆ ಮೀನಾಕ್ಷಿಯು ಚಿಕ್ಕಪ್ಪ ನಾಗೇಶ್​ನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ಅಪ್ರಾಪ್ತೆ ಆತನಿಗೆ ಹೇಳಿದ್ದಳು. ಆದರೆ, ಮೀನಾಕ್ಷಿಯ ಚಿಕ್ಕಪ್ಪ ಅಪ್ರಾಪ್ತೆಯ ಪ್ರೀತಿಯನ್ನು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಅಪ್ರಾಪ್ತೆ ನಾಗೇಶ್​, ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿಯನ್ನು ಬಾವಿಯೊಳಗೆ ಹಾಕಿದ್ದಾಳೆ.

ಬಳಿಕ ಮೀನಾಕ್ಷಿಯನ್ನು ಆತನ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮಗು ಕಾಣದಿದ್ದಾಗ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದ್ದಾರೆ. ಅವರೊಂದಿಗೆ, ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಚಾರ ತಿಳಿದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ. ಅಪ್ರಾಪ್ತೆಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದಾಗ, “ಮೀನಾಕ್ಷಿ ಚಿಕ್ಕಪ್ಪ ನನ್ನ ಪ್ರೀತಿ ನಿರಾಕರಿಸಿದರು. ಈ ಸಿಟ್ಟಿನಲ್ಲಿ ಕೊಲೆ ಪ್ರಕರಣದಲ್ಲಿ ಮೀನಾಕ್ಷಿ ಚಿಕ್ಕಪ್ಪ ಜೈಲಿಗೆ ಹೋಗಲಿ ಅಂತ ಈ ಕೃತ್ಯ ಎಸಗಿದ್ದೇನೆ” ಎಂದು ಪೊಲೀಸರ ಎದುರು ಅಪ್ರಾಪ್ತೆ ಬಾಯಿ ಬಿಟ್ಟಿದ್ದಾಳೆ.” ಯಾದಗಿರಿ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories