ಯಾದಗಿರಿ: ಆಪ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ

ಯಾದಗಿರಿ: ಚುನಾವಣಾ ಪ್ರಚಾರದ ವೇಳೆ ಆಮ್ ಆದ್ಮಿ ಪಕ್ಷದ (AAP) ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ (Assault) ಮಾಡಿರುವಂತಹ ಘಟನೆ ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ ಹುಣಸಗಿ ತಾಲೂಕಿನ ತೊಳದಿನ್ನಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಪ್ರಚಾರ ಮಾಡಲು ಯಾಕೆ ಬಂದಿದ್ದೀಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸುರಪುರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆರ್.ಎಂ.ನಾಯಕ ಎದರೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಜೊತೆ ಆರ್.ಎಂ.ನಾಯಕ ಪ್ರಚಾರಕ್ಕೆ ಹೋಗಿದ್ದು, ಅಭ್ಯರ್ಥಿ ಪ್ರಚಾರ ಭಾಷಣ ಮಾಡುವಾಗ  ಘಟನೆ ನಡೆದಿದೆ.

Latest Indian news

Popular Stories