Featured StoryNational

ವಯನಾಡು ದುರಂತ: ದಾಖಲೆಯ ಸಮಯದಲ್ಲಿ ತಾತ್ಕಲಿಕ ಸೇತುವೆ ನಿರ್ಮಿಸಿದ ಸೇನೆ | 500 ಕ್ಕೂ ಹೆಚ್ಚು ಯೋಧರಿಂದ ರಕ್ಷಣಾ ಕಾರ್ಯಾಚರಣೆ

ಚುರಲ್‌ಮಲಾ: ಚುರಲ್‌ಮಲಾದಲ್ಲಿ ಶಾಶ್ವತ ಸೇತುವೆ ನಿರ್ಮಿಸುವವರೆಗೆ ಬೈಲಿ ಸೇತುವೆಯನ್ನು ನಿರ್ವಿುಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಮೇಜರ್ ಜನರಲ್ ವಿನೋದ್.ಟಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಕಂಡುಬಂದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಯಾಗಿದೆ ಎಂದು ಮೇಜರ್ ಜನರಲ್ ಕೇರಳದ ಮಾಧ್ಯಮ ಮೀಡಿಯಾ ಒನ್‌ಗೆ ತಿಳಿಸಿದ್ದಾರೆ.

‘ಸಾಮಾಗ್ರಿಗಳನ್ನು ಬೆಂಗಳೂರಿನಿಂದ ರಸ್ತೆ ಮೂಲಕ ತರಲಾಗಿದೆ. ಸೇತುವೆಯನ್ನು ದಾಖಲೆ ಸಮಯದಲ್ಲಿ ನಿರ್ಮಿಸಲಾಗಿದೆ. ಅದಕ್ಕಾಗಿ ಹಗಲಿರುಳು ಶ್ರಮಿಸಿದ್ದೇವೆ. ಇಂದು ಮಧ್ಯಾಹ್ನದ ವೇಳೆಗೆ ಸೇತುವೆ ಸಿದ್ಧವಾಗಲಿದೆ. ಇದರೊಂದಿಗೆ ರಕ್ಷಣಾ ಕಾರ್ಯಾಚರಣೆ ಎರಡನೇ ಹಂತ ತಲುಪಲಿದೆ. ಎಲ್ಲಾ ವಾಹನಗಳು ಇದರ ಮೂಲಕ ಸಂಚರಿಸಬಹುದು. 500ಕ್ಕೂ ಹೆಚ್ಚು ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೇಜರ್ ಜನರಲ್ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button