Uttara Kannada

ಭಾರೀ ಮಳೆ :ಶನಿವಾರ ಈ ಜಿಲ್ಲೆಯ ಶಾಲಾ‌ ಕಾಲೇಜುಗಳಿಗೆ ರಜೆ

ಕಾರವಾರ: ಶನಿವಾರ ಹಗಲು ಭಾರೀ ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.‌ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಎಲ್ಲಾ ತಾಲೂಕು ಹಾಗೂ ಜೊಯಿಡಾ ,ದಾಂಡೇಲಿ ತಾಲೂಕಿನ ಶಾಲಾ ಕಾಲೇಜು ,ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.


ಹಳ್ಳ,ಕೊಳ್ಳ‌ ,ನದಿಗಳು ತುಂಬಿ ಹರಿಯುತ್ತಿದ್ದು ಅವಘಡ ಸಂವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯ ದಾಂಡೇಲಿ, ಜೊಯಿಡಾ , ಶಿರಸಿ, ಸಿದ್ದಾಪುರ ಹಾಗೂ ಕರಾವಳಿ ತಾಲೂಕಿನ ಎಲ್ಲಾ ಶಾಲಾ ಕಾಲೇಜು, ಐಟಿಐ, ಡಿಪ್ಲೊಮಾ ,ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ರಜೆ ಘೋಷಿಸಿದ್ದಾರೆ. ಸರ್ಕಾರಿ ಶಾಲೆಗಳಂತೆ, ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳಿಗೆ ಸಹ ಈ ಆದೇಶ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ‌ವಿಭಾಗಗಳ ಸಹಾಯಕ ಕಮಿಷನರ್ ,ತಹಶಿಲ್ದಾರರು, ಡಿಡಿಪಿಐ, ಬಿಇಒಗಳು ರಜೆಯ ಆದೇಶ ಪಾಲಿಸಲು ಸೂಚಿಸಲಾಗಿದೆ.
…..

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button