Kodagu

ಮಾರುತಿ ವ್ಯಾನ್ ಮೇಲೆ ಕಾಡಾನೆ ದಾಳಿ

ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ವ್ಯಾನ್ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಇಂದು ಬೆಳಗ್ಗೆ ಬೆಳಗ್ಗೆ 11:30 ಗಂಟೆ ಸಮಯದಲ್ಲಿ
ಪೊನ್ನಂಪೇಟೆ ತಾಲೂಕು ಕಾನೂರು ಕುಟ್ಟ ರಸ್ತೆಯ ಕೇಂಬುಕೊಲ್ಲಿಯ ಬಿ.ಸಿ ಕುಟ್ಟಪ್ಪನವರ ಮನೆಯ ಮುಂಭಾಗ ನಡೆದಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಮುಕ್ಕಾಟೀರ ಮಧು ಎಂಬುವವರ ಮಾರುತಿ ವ್ಯಾನನ್ನು ದಿಡೀರ್ ಪ್ರತ್ಯಕ್ಷ ಗೊಂಡ ಮೂರು ಆನೆಗಳ ಪೈಕಿ ಒಂದು ಆನೆ ಅಡ್ಡಗಟ್ಟಿ ಮುಂಬಾಗವನ್ನು ಗುದ್ದಿ ಜಖಂ ಗೊಳಿಸಿದೆ.

ಹಿಂಬದಿಯಲ್ಲಿ ವಾಹನಗಳ ಸಾಲು ಇದ್ದುದರಿಂದ ಬೆದರಿದ ಆನೆಗಳು ವ್ಯಾನನ್ನು ಬಿಟ್ಟು ತೋಟದೊಳಗೆ ನುಸುಳಿವೆ. ವ್ಯಾನಿನೊಳಗಿದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button