Crime

ಮರಗಳ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಗ್ರಾ.ಪಂ State Highways

ಮಡಿಕೇರಿ ಏ.೨೫ : State Highways ವಿರಾಜಪೇಟೆ ತಾಲ್ಲೂಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಹೆದ್ದಾರಿಯ ರಸ್ತೆ ಬದಿಗಳಲ್ಲಿದ್ದ ಬೃಹತ್ ಗಾತ್ರದ ಮರಗಳ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

State Highway Crime


ಸತತ ನಾಲ್ಕು ವರ್ಷಗಳಿಂದ ರಸ್ತೆ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸುವಂತೆ ಗ್ರಾ.ಪಂ ಗಳು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು ಯಾವುದೇ ರೀತಿಯ ಸ್ಪಂದನೆ ದೊರೆತ್ತಿರಲಿಲ್ಲ. ಈ ಕಾರಣದಿಂದ ಪಂಚಾಯತಿಗಳು ಸಾಮಾನ್ಯ ಸಭೆಯಲ್ಲಿ ಮರಗಳ ಕೊಂಬೆಗಳನ್ನು ತೆರವುಗೊಳಿಸಲು ನಿರ್ಧಾರ ಕೈಗೊಂಡವು.
ಅರಣ್ಯ ಇಲಾಖೆಯ ಅನುಮತಿಯೊಂದಿಗೆ ರಸ್ತೆಗೆ ಅಡ್ಡಲಾಗಿದ್ದ ೧೦೦ ಕ್ಕೂ ಅಧಿಕ ಮರಗಳ ಕೊಂಬೆಗಳನ್ನು ತೆರವುಗೊಳಿಸಲಾಯಿತು. ಸತತ ನಾಲ್ಕು ದಿನಗಳ ಕಾಲ ಆರ್ಜಿ ಪಂಚಾಯಿತಿ ವ್ಯಾಪ್ತಿಯ ರಾಜಾ ಕಾಲುವೆಯ ಮುಂಭಾಗದ ಅನ್ವರಲ್ ಹುದಾ ಮಸೀದಿಯಿಂದ ಹೆಗ್ಗಳ ಗ್ರಾಮಕ್ಕೆ ತೆರಳುವ ರಸ್ತೆಯ ವರೆಗೆ ಮರಗಳನ್ನು ತೆರವುಗೊಳಿಸಲಾಯಿತು.
ತೆರವು ಕಾರ್ಯಚರಣೆಯ ಸಂದರ್ಭ ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಒ ಬಿ.ಮಣ , ಆರ್ಜಿ ಉಪಾಧ್ಯಕ್ಷ ಕೆ.ಎನ್.ಉಪೇಂದ್ರ, ಬೇಟೋಳಿ ಗ್ರಾ.ಪಂ ಸದಸ್ಯ ಅಮ್ಮಣಕುಟ್ಟಂಡ ವಸಂತ್ ಕಟ್ಟಿ, ಸಿಬ್ಬಂದಿಗಳಾದ ಮಂಜುನಾಥ್ ಪಟ್ಟದ್, ಅನಿಲ್ ಮೆನೆಜಸ್ಸ್, ನಂಜುAಡ ಸ್ವಾಮಿ, ಪರಶುರಾಮ ಬಂಗಾರಿ ಹಾಗೂ ಗ್ರಾಮಸ್ಥರು ಹಾಜರಿದ್ದರು. ಫೋಟೋ :: ಟ್ರೀ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button