Kodagu

ಮಗನ ಚಿಕಿತ್ಸೆಗಾಗಿ ವೈದ್ಯರಿಗೆ ಮೊರೆ ಇಟ್ಟ ತಾಯಿ; ಮಾನವೀಯತೆ ತೋರಿದ ಡಾ.ಸಲ್ಮಾ

ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಘಟನೆ….

ನಿನ್ನೆ ರಾತ್ರಿಯಿಂದ ನಿರಂತರ ವಾಂತಿ ಮಾಡಿಕೊಳ್ಳುತ್ತಿರುವ ಭಾಗಮಂಡಲ ವಸತಿ ಶಾಲೆಯಲ್ಲಿ ಓದುತ್ತಿರುವ ರಿಜಿತ್ ಎಂಬ ವಿದ್ಯಾರ್ಥಿಗೆ ಇಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಬಂದ ತಾಯಿಗೆ ಆಘಾತವಾಗಿದೆ.

ಇಂದು ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗದಲ್ಲಿ ಡ್ಯೂಟಿ ಮಾಡಬೇಕಿದ್ದ ವೈದ್ಯರು ಮುಷ್ಕರಕ್ಕೆ ತೆರಳಿರುವ ಕಾರಣ ಬದಲಿ ವೈದ್ಯರ ವ್ಯವಸ್ಥೆಯಿಲ್ಲದೆ ಮಕ್ಕಳನ್ನು ಚಿಕಿತ್ಸೆಗೆ ಕರೆತಂದಿದ್ದ ಪೋಷಕರು ಪರದಾಡುವಂತಾಯಿತು. ಮಗನಿಗೆ ಚಿಕಿತ್ಸೆ ನೀಡಿ ಎಂದು ಎಲ್ಲಾ ವೈದ್ಯರ ಮೊರೆ ಹೋದರು ಪ್ರಯೋಜನವಾಗದೇ ನಿನ್ನೆ ರಾತ್ರಿ ಪಾಳಯದಲ್ಲಿ ಡ್ಯೂಟಿ ಮಾಡಿದ್ದ ಮಹಿಳಾ ವೈದ್ಯೆ ಸಲ್ಮಾ ನಂತರ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂದು ವೈದ್ಯರ ಮುಷ್ಕರದಿಂದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಸಂಕಷ್ಟಗೀಡಾಗಿದ್ದಾರೆ. ಇದೀಗ ಡಾ.ಸಲ್ಮಾಳ ಕಾರ್ಯ ಶ್ಲಾಘನೆ ವ್ಯಕ್ತವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button