
ಮಣಿಪಾಲ ಅಪಾರ್ಟ್ಮೆಂಟ್ ಕಳ್ಳತನ ಪ್ರಕರಣ: ಇಬ್ಬರ ಬಂಧನ
ಆಗಸ್ಟ್ 31 ರಂದು ಮಣಿಪಾಲ ಠಾಣಾ ವ್ಯಾಪ್ತಿಯ ವಿದ್ಯಾರತ್ನ ನಗರದಲ್ಲಿ ಇರುವ ಪ್ರಿನ್ಸೆಸ್ ಕೀರ್ತಿ ಅಪಾರ್ಟಮೆಂಟನ್ ನಲ್ಲಿ ವಾಸವಿರುವ ಆಕಾಶ್ ಸಿ ಸೂರ್ಯ ವಂಶಿ ಎಂಬವರ ರೂಮಿನಲ್ಲಿ ಸುಮಾರು 400000/- ರೂ ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು 01 ಆಪಲ್ ಕಂಪನಿಯ ಒಂದು ಐಪಾಡ್ ಕಳತನವಾಗಿದ್ದು, ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತು.
ಪ್ರಕರಣದ ಪತ್ತೆಗಾಗಿ ಮಣಿಪಾಲ ಪಿ,ಐ ಟಿ,ವಿ ದೇವರಾಜ್ ನೇತ್ರತ್ವದಲ್ಲಿ ಪಿ,ಎಸ್,ಐ ರಾಘವೇಂದ್ರ, ಪಿ,ಎಸ್,ಐ ಅಕ್ಷಯ ಕುಮಾರಿ, ಎ,ಎಸ್,ಐ ವಿವೇಕಾನಂದ , ಹೆಚ್,ಸಿ, ಇಮ್ರಾನ್, ಹೆಚ್,ಸಿ ಸುಕುಮಾರ್ ಶೆಟ್ಟಿ ಹಾಗೂ ಪಿ,ಸಿ ರಘು ನೇತ್ರತ್ವದ ತಂಡವನ್ನು ರಚಿಸಲಾಗಿತ್ತು. ಈ ತಂಡವು ಸೆ.2 ರಂದು ಕಳ್ಳತನ ಪ್ರಕರಣದ ಆರೋಪಿಗಳಾದ ಪಿ ಕಾರ್ತೀಕ್ ಮತ್ತು ಬಾಲನ್ ಗೋವಿಥಾನ್ ಇವರನ್ನು ಉಡುಪಿ ಜಿಲ್ಲೆಯ ಕಟಪಾಡಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡು, ಸದ್ರಿ ಆರೋಪಿಗಳಿಂದ ಸುಮಾರು 400000/- ರೂ ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು 01 ಆಪಲ್ ಕಂಪನಿಯ ಒಂದು ಐಪಾಡ್ ನ್ನು ವಶಪಡಿಸಿಕೊಂಡು ಆರೋಫಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಮಣಿಪಾಲ ನಗರದಲ್ಲಿ ಅನೇಕ ಅಪಾರ್ಟಮೆಂಟ್ ಗಳು ಇದ್ದು, ಬಹುತೇಕ ವಿದ್ಯಾರ್ಥಿಗಳು ಅಪಾರ್ಟಮೆಂಟ್ ನಲ್ಲಿ ವಾಸವಿದ್ದು, ವಿದ್ಯಾರ್ಥಿಗಳು ಅವರು ಬಳಸುವ ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್ ಟಾಪ್, ಮೊಬೈಲ್, ಐಪಾಡ್ ಗಳನ್ನು ರೂಮ್ ನಲ್ಲಿ ಇಟ್ಟು ಬಾಗಿಲು ಹಾಕದೇ ನಿರ್ಲಕ್ಷವಹಿಸುತ್ತಿದ್ದು ಆರೋಪಿಗಳು ಇದನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗರೂಕತೆಯಿಂದ ಇರಬೇಕೆಂದು ತಿಳಿಸಲಾಗಿದೆ.




