
ಬೀದರ್: ವಕೀಲೆ, ಎಂಎಸ್‌ಡಬ್ಲೂö್ಯ ಪದವೀಧರೆ ಆಗಿರುವ ಇಲ್ಲಿಯ ಉಲ್ಲಾಸಿನಿ ವಿಕ್ರಮ ಮುದಾಳೆ ಮೊದಲ ಬಾರಿಗೆ ಬೀದರ್ ನಗರಸಭೆ ಮೆಟ್ಟಿಲು ಹತ್ತಿದ್ದಾರೆ. ವಾರ್ಡ್ ಸಂಖ್ಯೆ 18 ರಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ 34 ವರ್ಷದ ಅವರು 750 ಮತಗಳ ಅಂತರದಿAದ ಜಯ ಗಳಿಸಿದ್ದಾರೆ.
ಒಟ್ಟು ಚಲಾವಣೆಯಾದ 1,727 ಮತಗಳ ಪೈಕಿ ಉಲ್ಲಾಸಿನಿ 1,183 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 433 ಹಾಗೂ ಜೆಡಿಎಸ್ ಅಭ್ಯರ್ಥಿ 94 ಮತಗಳನ್ನು ಪಡೆದಿದ್ದಾರೆ. ಉಲ್ಲಾಸಿನಿ ಅವರ ಪತಿ ವಿಕ್ರಮ ಮುದಾಳೆ ಕೂಡ ವಕೀಲರೇ ಆಗಿರುವುದು ವಿಶೇಷವಾಗಿದೆ.




