Uttara Kannada

ಕಾರವಾರ ಕಡಲತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಶಾಸಕ ಸೈಲ್ ಚಾಲನೆ

ಕಾರವಾರ: ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ನಡೆದ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಕಸ ಎತ್ತುವ ಮೂಲಕ ಉದ್ಘಾಟಿಸಿದರು.
ಸ್ವಚ್ಛತೆಯೇ ಸೇವೆ -2024 ರ ಆಂದೋಲನದ ಅಂಗವಾಗಿ ಕಡಲತೀರದಲ್ಲಿ ಪ್ಲಾಸ್ಟಿಕ್ ಆರಿಸಿ , ವಿದ್ಯಾರ್ಥಿಗಳ ಜೊತೆ ಅವರು ಪೋಟೋ ತೆಗೆಸಿಕೊಂಡರು‌.

ನಂತರ ಮಾಧ್ಯಮಗಳ ಜೊತೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಗ್ರಾಮದ ಬಳಿ ಗುಡ್ಡ ಕುಸಿದ ಪರಿಣಾಮ ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣಿನ ರಾಶಿಯನ್ನು ಡ್ರಜ್ಜಿಂಗ್ ಮೂಲಕ ಎತ್ತುವ ಕಾರ್ಯ ನಾಳೆಯಿಂದ ಆರಂಭವಾಗಲಿದೆ.

ಹಾಗೂ ಮಣ್ಣಿನಡಿ ಸಿಲುಕಿ ಕಾಣೆಯಾದ ಕೇರಳದ ಅರ್ಜುನ್, ಶಿರೂರನ ಜಗನ್ನಾಥ, ‌ಗಂಗೇಕೊಳ್ಳದ ಲೋಕೇಶ್ ನಾಯ್ಕ ಅವರ ಶವಗಳನ್ನು ಹುಡುಕಿ ಮೇಲೆತ್ತುವ ಶೋಧ ಸಹ ನಡೆಯಲಿದೆ ಎಂದರು. ಅಲ್ಲದೇ ಕಾಳಿ ನದಿಯಲ್ಲಿ ಕುಸಿದ ಹಳೆಯ ಸೇತುವೆಯ ಅವಶೇಷ ಮೇಲೆತ್ತುವ ಕೆಲಸ ನಡೆದಿದೆ.

ಅವಶೇಷವನ್ನು ಮೀನುಗಾರರಿಗೆ ತೊಂದರೆ ಆಗದ ರೀತಿಯಲ್ಲಿ ಸಮುದ್ರ ತೀರದಲ್ಲಿ ಸಂಗ್ರಹಿಸಿ, ನಂತರ ಬೇರೆಡೆ ಸಾಗಿಸಲಾಗುವುದು ಎಂದರು. ನಗರಸಭೆಯ ಕಾಂಗ್ರೆಸ್ ಸದಸ್ಯರು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button