Raichur

ಆಮ್ಲಜನಕದ ಆಡಿಟ್ ವರದಿ ಪ್ರತಿದಿನ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

ರಾಯಚೂರು,ಮೇ.೦೪.(ಕ.ವಾ):- ಕೋವಿಡ್ ಸೋಂಕಿಗೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಉಪಚಾರಕ್ಕೆ ಪ್ರಾಣವಾಯುವಾಗಿರುವ ಆಕ್ಸಿಜನ್‌ನ ಕೃತಕ ಅಭಾವ ಜಿಲ್ಲೆಯಲ್ಲಿ ಎದುರಾಗಬಾರದು, ಅದಕ್ಕಾಗಿ ಪ್ರತಿದಿನ ಜಿಲ್ಲೆಯ ಆಸ್ಪತ್ರೆಗಳಿಗೆ ಸರಬರಾಜಾಗುವ ಆಕ್ಸಿಜನ್ ಆಡಿಟ್ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಮೇ.೪ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಆಕ್ಸಿಜನ್ ಪೂರೈಕೆಗೆ ಸಂಬAಧಿಸಿದAತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೆಕ್ಕಾಚಾರದಂತೆ ಪ್ರತಿ ದಿನ ಜಿಲ್ಲೆಗೆ ೧೦ ರಿಂದ ೧೨ ಕಿಲೋ ಲೀಟರ್ (ಕೆ.ಎಲ್) ಆಕ್ಸಿಜನ್ ಬೇಕಿದ್ದು, ಇದನ್ನು ಪೂರೈಸುವ ರಾಯಚೂರು ಇಂಡಸ್ಟಿçÃಯಲ್ ಗ್ಯಾಸಸ್ (೧೦ ಕೆ.ಎಲ್), ಎಂಎಸ್‌ಪಿಎಲ್ (೨೦ ಕೆ.ಎಲ್) ಹಾಗೂ ಪಿಒಸಿ ಗ್ಯಾಸಸ್ (೨೦ ಕೆ.ಎಲ್) ಸಂಸ್ಥೆಗಳು ಒಟ್ಟಾರೆ ೫೦ ಕೆ.ಎಲ್ ಆಮ್ಲಜನಕವನ್ನು ಜಿಲ್ಲೆಗೆ ಪೂರೈಕೆ ಮಾಡುತ್ತಿವೆ, ಈ ಸಂಸ್ಥೆಗಳು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ದಿನ ಸರಬರಾಜು ಮಾಡುತ್ತಿರುವ ಆಕ್ಸಿಜನ್‌ನ ಪ್ರಮಾಣ, ಅಲ್ಲಿರುವ ರೋಗಿಗಳಿಗೆ ಆಕ್ಸಿಜನ್ ನೀಡಿದ ವಿವರ, ಆಸ್ಪತ್ರೆಗಳ ಬೇಡಿಕೆ, ಆ ಆಸ್ಪತ್ರೆಗಳಿಗೆ ಅಗತ್ಯವಿರುವ ಆಮ್ಲಜನಕದ ವಿವರಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಸಹಾಯಕ ಔಷಧ ನಿಯಂತ್ರಕರು ಹಾಗೂ ಇತರೆ ತಜ್ಞರನ್ನೊಳಗೊಂಡ ಸದಸ್ಯರು ಪ್ರತಿ ದಿನದ ಆಡಿಟ್ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಈ ದಿಸೆಯಲ್ಲಿ ಕೋವಿಡ್ ಚಿಕಿತ್ಸೆ ನೀಡುತ್ತಿರುವ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳನ್ನು ಪರಿಶೀಲಿಸಬೇಕು, ಯಾವ ಯಾವ ಆಸ್ಪತ್ರೆಗೆ ಎಷ್ಟು ಪ್ರಮಾಣದ ಆಕ್ಸಿಜನ್ ಸರಬರಾಜಾಗುತ್ತಿದೆ ಎಂಬುದರ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು, ಅದರ ವಿಡಿಯೋ ಹಾಗೂ ಪೋಟೋಗ್ರಫಿ ಮಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಪ್ರಾಣವಾಯುವಿನ ಕೃತಕ ಅಭಾವ ಸೃಷ್ಟಿಯಾಗಬಾರದು, ಯಾವುದೇ ರೋಗಿಗೆ ಅಗತ್ಯವಿರುವ ಆಮ್ಲಜನಕ ಪೂರೈಕೆಯಲ್ಲಿ ವಿಳಂಬ ಅಥವಾ ವ್ಯತ್ಯಯವಾಗಬಾರದು, ರೋಗಿಗಳ ಉಪಚಾರಕ್ಕಾಗಿ ಖರೀದಿಸಲಾದ ಆಕ್ಸಿಜನ್ ಕಾನ್ಸ್ಟ್ರೆಂಟರ್ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಜೈಲಿಗೆ ಹಾಕಲಾಗುವುದು: ರಾಯಚೂರು ಇಂಡಸ್ಟಿçÃಸ್ ಗ್ಯಾಸ್ ಸಂಸ್ಥೆ ಜಿಲ್ಲೆಗೆ ಆಮ್ಲಜನಕ ಪೂರೈಸುತ್ತಿದೆ ಎಂದು ಸಂಸ್ಥೆಯ ಪ್ರತಿನಿಧಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯಾವ ಆಸ್ಪತ್ರೆಗೆ ಎಷ್ಟು ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ, ಎಷ್ಟು ಗಂಟೆಗೆ ಆರಂಭಿಸುತ್ತೀರಿ, ನಿನ್ನೆ ಬಂದ ಆಕ್ಸಿಜನ್‌ನ ವಿವರ ನೀಡುವಂತೆ ಸೂಚಿಸಿದಾಗ ಪ್ರತಿನಿಧಿ ಅಜೀತ್ ಸಿಂಗ್ ಸಮರ್ಪಕ ಉತ್ತರ ನೀಡಲಿಲ್ಲ, ಆ ಪ್ರತಿನಿಧಿಯನ್ನು ಚಲನ ವಲನಗಳ ಮೇಲೆ ಹಾಗೂ ಆ ಸಂಸ್ಥೆಯ ಮೇಲೆ ಕಣ ್ಣಡುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು ಆಮ್ಲಜನಕದ ಕೃತಕ ಅಭಾವ ಸೃಷ್ಟಿಗೆ ಕಾರಣರಾದಲ್ಲೀ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಸಹಾಯಕ ಔಷಧ ನಿಯಂತ್ರಕ ವೆಂಕಟೇಶ್, ಆಮ್ಲಜನಕ ಪೂರೈಕೆ ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿದ್ದರು.

ಪುನರುಜ್ಜೀವನಕ್ಕೆ ಕೋರಿಕೆ: ರಾಯಚೂರು ಬೆಳವಣ ಗೆ ಕೇಂದ್ರದಲ್ಲಿ ಕಾರ್ಯನಿರ್ವಹಿಸಿ, ೨೦೧೨ರಲ್ಲಿ ಸ್ಥಗಿತಗೊಂಡ ಸುರಾನಾ ಇಂಡಸ್ಟಿçÃಸ್ ಲಿಮಿಟೆಡ್‌ನಲ್ಲಿ ರೋಗಿಗಳಿಗೆ ಅಗತ್ಯವಿರುವ ಪ್ರಾಣವಾಯು ಆಮ್ಲಜನಕದ ಉತ್ಪಾದನಾ ಪ್ಲಾಂಟ್ ಮಾಡಬಹುದಾಗಿದ್ದು, ಈ ದಿಸೆಯಲ್ಲಿ ಅದರ ಪುನರುಜ್ಜೀನವಕ್ಕೆ ಕ್ರಮವಹಿಸಬಹುದಾಗಿರುತ್ತದೆ.
ಒಂದು ಪ್ಲಾಂಟ್‌ನಲ್ಲಿ ೫೦ ಕೆ.ಎಲ್ ಹಾಗೂ ಮತ್ತೊಂದರಲ್ಲಿ ೧೦ ಕೆ.ಎಲ್ ಆಮ್ಲಜನಕವನ್ನು ಉತ್ಪತ್ತಿ ಮಾಡಲು ಸಾಧ್ಯವಿದೆ, ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಗೂ ಅಗತ್ಯವಿರುವ ಪ್ರಾಣವಾಯುವನ್ನು ಸರಬರಾಜು ಮಾಡಬಹುದಾಗಿದೆ, ಆದ ಕಾರಣ ಆ ಪ್ಲಾಂಟ್‌ಗಳ ಪುನರುಜ್ಜೀವನದ ಕ್ರಮಕ್ಕಾಗಿ ಕೈಗಾರಿಕಾ ಮತ್ತು ವಾಣ ಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಪತ್ರಮುಖೇನ ಕೋರಿಕೆ ಸಲ್ಲಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button