
ವ್ಯಕ್ತಿ ಕಾಣೆ:ಪ್ರಕರಣ ದಾಖಲು ಕೆ.ಕೆ.ಹಾಳ್
ಬಳ್ಳಾರಿ,ಮೇ05(ಕರ್ನಾಟಕ ವಾರ್ತೆ):ಕೆ.ಕೆ.ಹಾಳ್ ಗ್ರಾಮದ ನಿವಾಸಿ ಸುಮಾರು 55 ವರ್ಷದ ಮಾರೆಪ್ಪ ಎನ್ನವು ವ್ಯಕ್ತಿ ಕಳೆದ 2019ರ ಅ.6ರಿಂದ ಕಾಣೆಯಾಗಿರುವ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಬ್ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: 5.5ಅಡಿ ಎತ್ತರ, ಸಾಧಾರಣಾ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಚೂಪಾದ ಮೂಗು, ಆನೆ ಕಾಲುಗಳು, ಹಣೆಯ ಮೇಲೆ ಎರಡು ಭಾಗದಲ್ಲಿ ಕೂದಲುಗಳು ಇರುವುದಿಲ್ಲ, ಕಪ್ಪು ಮಿಶ್ರಿತ ಬಿಳಿ ಗಡ್ಡ, ವಿಶಾಲವಾದ ಹಣೆ, ಕನ್ನಡ ಭಾಷೆ ಮಾತನಾಡಲು ಬಲ್ಲವನಾಗಿದ್ದು, ಧೂಮಪಾನ ಮತ್ತು ಮಧ್ಯಸೇವನೆ ಮಾಡುತ್ತಾನೆ. ಬಿಳಿ ಬಣ್ಣದ ಶರ್ಟ್, ಬಿಳಿ ಪಂಚೆ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಎಸ್.ಪಿ.ರೈಲ್ವೇಸ್ ಬೆಂಗಳೂರು ದೂ.ಸಂ:080-228272149, ಡಿಎಸ್ಪಿ ರೈಲ್ವೇಸ್ ಗುಲ್ಬರ್ಗಾ, ದೂ.ಸಂ: 08472-263654, ರೈಲ್ವೇ ಕಂಟ್ರೋಲ್ ರೂಂ. ಬೆಂಗಳೂರು ದೂ.ಸಂ: 080-22871291, ಸಿಪಿಐ ರೈಲ್ವೇ ರಾಯಚೂರು ದೂ.ಸಂ:08532-231716, ರೈಲ್ವೇ ಪೊಲೀಸ್ ಠಾಣೆ ಬಳ್ಳಾರಿ ದೂ.ಸಂ: 08392-276063, ರೈಲ್ವೇ ಪೊಲೀಸ್ ಸಬ್ಇನ್ಸ್ಪೆಕ್ಟರ್ ಬಳ್ಳಾರಿ ಮೊ.ಸಂ:9480802131 ಗೆ ಸಂಪರ್ಕಿಸಲು ಕೋರಿದೆ.




