Special StoriesUttara Kannada

ಉ.ಕ | ಜಿಲ್ಲಾ ರಂಗಮಂದಿರ ಶಿಫ್ಟ್? | ಮಾಲಾದೇವಿ ಕ್ರೀಡಾಂಗಣ ಮತ್ತಷ್ಟು ವಿಸ್ತರಣೆಕ್ರೀಡಾಂಗಣಕ್ಕೆ ಹೆಚ್ಚುವರಿ 30 ಗುಂಟೆ ಜಾಗ ಲಭ್ಯ‌

ವಿಶೇಷ ವರದಿ


ಕಾರವಾರ : ನಗರದ ಮಾಲಾದೇವಿ ಕ್ರೀಡಾಂಗಣದ ಎಡ ತುದಿಗೆ ಇರುವ ಜಿಲ್ಲಾ ರಂಗಮಂದಿರ ಶಿಥಿಲಗೊಂಡಿದ್ದು, ಹೊಸ ರಂಗಮಂದಿರದ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆದಿದೆ.
ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗಂಗಬಾಯಿ ಮಾನಕರ್ ಕಾಲದಲ್ಲಿ ನೂತನ ರಂಗ ಮಂದಿರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು.

ಕನ್ನಡ ಸಂಸ್ಕೃತಿ ಇಲಾಖೆಯ ಅಧೀನದ ರಂಗಮಂದಿರ ಸೋರುತ್ತಿರುವ ಕಾರಣ, ಮರು ನಿರ್ಮಾಣದ ಅಗತ್ಯತೆ ಇದೀಗ ಕಾಣುತ್ತಿದೆ.ರಂಗಮಂದಿರದಲ್ಲಿ ನಡೆಯುತ್ತಿದ್ದ ಬಹುತೇಕ ಸರ್ಕಾರಿ ಕಾರ್ಯಕ್ರಮಗಳು ಇದೀಗ ಕಾಜೂಭಾಗದಲ್ಲಿನ ಸುಸಜ್ಜಿತ ಪೊಲೀಸ್ ಕಲ್ಯಾಣ ಭವನಕ್ಕೆ ಶಿಫ್ಟ್ ಅಗಿವೆ.

ಕ್ರೀಡಾಂಗಣ ವಿಸ್ತರಣೆ:
ಪ್ರಸ್ತುತ ಜಿಲ್ಲಾ ರಂಗಮಂದಿರ ಕಟ್ಟಡ ಮಾಲಾದೇವಿ ಕ್ರೀಡಾಂಗಣದ ಆವರಣದಲ್ಲಿದೆ. ಕಾರವಾರದ ತಾಲೂಕಾ ಅತೀ ಚಿಕ್ಕದಾಗಿದ್ದು, ರಂಗಮಂದಿರವನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಹೊಸ ಕಟ್ಟಡವನ್ನು ಬೇರೆ ಕಡೆ
ನಿರ್ಮಿಸಿಬಹುದು ಎಂಬ ಚಿಂತನೆ ಸಹ ನಡೆದಿದೆ. ಮಾಲಾದೇವಿ ಕ್ರೀಡಾಂಗಣದ ಒಂದು ತುದಿಗೆ ಇರುವ ಜಿಲ್ಲಾ ರಂಗಮಂದಿರ ಕನಿಷ್ಠ 25 ರಿಂದ 30 ಗುಂಟೆ ಜಾಗದಲ್ಲಿ ಹರಡಿಕೊಂಡಿದೆ. ಈಗ ಸೋರಿವ ಈ ಕಟ್ಟಡ ತೆಗೆದರೆ ಕ್ರೀಡಾಂಗಣಕ್ಕೆ ಮುಕ್ಕಾಲು ಎಕರೆ (ಸರಿ ಸುಮಾರು 30 ಗುಂಟೆ ) ಜಾಗ ಲಭ್ಯವಾಗಿ ಕ್ರೀಡಾಂಗಣ ವಿಸ್ತರಣೆಗೆ ಅವಕಾಶ ತೆರೆದುಕೊಳ್ಳುತ್ತದೆ. ಈಗಾಗಲೇ ಮಾಲಾದೇವಿ ಕ್ರೀಡಾಂಗಣದ ಬಲ ತುದಿಗೆ ಸುಸಜ್ಜಿತ ಕ್ರೀಡಾಪಟುಗಳ ವಿಶ್ರಾಂತಿ , ಡ್ರೆಸ್ಸಿಂಗ್ ಸಂಕೀರ್ಣ ಸಹ ನಿರ್ಮಾಣವಾಗಿದೆ. ರಂಗ ಮಂದಿರ ಆವರಿಸಿಕೊಂಡ ಜಾಗ ಸಿಕ್ಕರೆ, ಕ್ರೀಡಾಪಟುಗಳಿಗೆ ಅಗತ್ಯ ಮೈದಾನ ಸಹ ಲಭ್ಯವಾಗುತ್ತದೆ.
ಮಾಲಾದೇವಿ ಕ್ರೀಡಾಂಗಣದ ಸಿಂಥಟಿಕ್ಸ ಟ್ರಾಕ್ ನಿರ್ಮಾಣಕ್ಕೆ ಅಗತ್ಯ ಭೂಮಿ ಲಭ್ಯವಾಗುವ ಕಾರಣದಿಂದ, ರಂಗ ಮಂದಿರವನ್ನು ಬಾಯಿ ಕುವರ ಬಾಯಿ ಶಾಲೆಯ ಆವರಣದ ವಿಶಾಲ ಜಾಗದಲ್ಲಿ ನಿರ್ಮಿಸಬಹುದು ಎಂಬ ಆಲೋಚನೆ ಕೆಲವರಲ್ಲಿ ಮೊಳಕೆಯೊಡೆದಿದೆ.


ಶಿಥಿಲಗೊಂಡ ರಂಗಮಂದಿರದ ತೆರವು ಗೊಂಡರೆ ಹೊಸ ರಂಗಮಂದಿರ ನಿರ್ಮಾಣಕ್ಕೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆಗಳು ಸಹ ಇವೆ.


ನಗರದ ಮಾಲಾದೇವಿ ಮೈದಾನದ ಎಡಬದಿಯಲ್ಲಿರುವ ರಂಗಮಂದಿರ 1869 ರಲ್ಲಿ ನಿರ್ಮಾಣವಾಗಿತ್ತು. ಈ ಭೂಮಿ ಸದ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ಒಡೆತನದಲ್ಲಿದೆ. 2011-12 ರಲ್ಲಿ ರಂಗ ಮಂದಿರ ಕಟ್ಟಡವನ್ನು ನವೀಕರಿಸಲಾಗಿತ್ತು. 600 ಜನರು ಕುಳಿತುಕೊಳ್ಳಬಹುದಾದ ಆಸನಗಳ ವ್ಯವಸ್ಥೆಯಿರುವ ಈ ರಂಗಮಂದಿರ ಇದೀಗ ಜೀರ್ಣೋದ್ಧಾರ ಮಾಡುವ ಸ್ಥಿತಿಯಲ್ಲೂ ಇಲ್ಲ. ನವೀಕರಣಗೊಂಡು ದಶಕ ಕಳೆದ ನಂತರ ಮೂರ್ನಾಲ್ಕು ಸಲ ಮೇಲ್ಛಾವಣಿ ಹಾಕಿ ಲಕ್ಷಾಂತರ ರೂ. ವ್ಯಯಿಸಲಾಗಿದೆ. ಸೀಟ್ ವ್ಯವಸ್ಥೆ, ಧ್ವನಿ ವ್ಯವಸ್ಥೆ , ಲೈಟ್ ವ್ಯವಸ್ಥೆ ರಿಪೇರಿಯ ಹೆಸರಲ್ಲಿ ಹಣ ಸುರಿಯಲಾಗಿದೆ. ಆದರೂ ಕಟ್ಟಡ ಸೋರುವುದು ನಿಲ್ಲದ ಕಾರಣ , ರಂಗ ಮಂದಿರದಲ್ಲಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದನ್ನು ನಿಲ್ಲಿಸಲಾಗಿದೆ. ಈಗ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.


2023- 24ನೇ ಸಾಲಿನಲ್ಲಿಯೇ ಕಟ್ಟಡದ ಸಾಮರ್ಥ್ಯ ಪರಿಶೀಲಿಸಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರಗಳ ತಂಡವು ಕಟ್ಟಡವು ಶಿಥಿಲಗೊಂಡಿದ್ದು, ತೆರವುಗೊಳಿಸಲು ಸಲಹೆಯನ್ನೂ ನೀಡಿತ್ತು. ಕಟ್ಟಡದ ಚಾವಣಿ ಹಾಳಾಗಿದ್ದು ಅದರ ದುರಸ್ತಿಗೆ ಹಿಂದೆ ಪ್ರಯತ್ನ ನಡೆದಿತ್ತು. ಆದರೆ, ಕಟ್ಟಡದ ಗೋಡೆ, ಕಾಂಕ್ರೀಟ್ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಕಟ್ಟಡವನ್ನೇ ತೆರವುಗೊಳಿಸಬೇಕು ಎಂದು ಎಂಜಿನಿಯರ್ಸ ಸಲಹೆಯಿಂದ ದುರಸ್ತಿ ಕಾರ್ಯ ಕೈಗೊಳ್ಳಲಿಲ್ಲ.
ನನೆಗುದಿಗೆ ಬಿದ್ದಿತ್ತು.

ಹಾಗಾಗಿ ರಾಜ್ಯದ ಗಡಿನಗರವಾದ ಕಾರವಾರದಲ್ಲಿನ ರಂಗಮಂದಿರವು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಶ್ರಯ ನೀಡಿತ್ತು. ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕ ಬಳಿಕವೇ ಹಳೆಯ ಕಟ್ಟಡ ತೆರವುಗೊಳಿಸುವ ಕಾರ್ಯ ಪ್ರಾರಂಭವಾಗಲಿದೆ. ಹೊಸ ಆಡಳಿತ ಸೌಧ ನಿರ್ಮಾಣ ಪೂರ್ಣವಾಗುವ ಹಂತದಲ್ಲಿದ್ದು, ಆ ಕಟ್ಟಡಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿ ಶಿಫ್ಟ್ ಆಗುವ ಸಾಧ್ಯತೆಗಳಿವೆ .

ರಂಗಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಹಾಗೂ ಅಂದಾಜು ಹತ್ತು ಕೋಟಿ ವೆಚ್ಚದ , ಬಿಲ್ಡಿಂಗ್ ಪ್ಲಾನ್ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಈ ವರ್ಷದ ಆರಂಭದಲ್ಲಿ ನೀಡಲಾಗಿದೆ. ಸರ್ಕಾರ ಅನುದಾನ ನೀಡಿ, ಸ್ಥಳ ಸೂಚಿಸಿದ ಕಡೆ ರಂಗಮಂದಿರ ಕಟ್ಟಡ ಕಟ್ಟಬಹುದು.

– ರಾಮು ಅರ್ಗೇಕರ್‌ . ಕಾರ್ಯನಿರ್ವಾಹಕ ಎಂಜಿನಿಯರ್. ಕಾರವಾರ ವಿಭಾಗ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button