
Featured StoryState News
ಕುರ್ಚಿಯಲ್ಲಿ ಟಗರು ಕುಂತವ್ರೆ, ಅವರನ್ನು ಅಲ್ಲಾಡಿಸಲು ಅಷ್ಟು ಸುಲಭನಾ..? – ಬಿಜೆಪಿಗೆ ಝಮೀರ್ ಖಡಕ್ ಪ್ರತಿಕ್ರಿಯೆ
ವಿಜಯಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿಎಂ ಕುರ್ಚಿಯಲ್ಲಿ ಟಗರು (ಸಿದ್ದರಾಮಯ್ಯ) ಕುಂತವ್ರೆ. ಆ ಟಗರಿಗೆ ಅಲ್ಲಾಡಿಸಲು ಅಷ್ಟು ಸುಲಭನಾ?, ಅದು ಸಾಧ್ಯನಾ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿಗೆ ಸವಾಲೆಸೆದಿದ್ದಾರೆ.
ದಲಿತ ಸಿಎಂ ವಿಚಾರವಾಗಿ ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿ ಇದ್ದರೆ ತಾನೆ ಮುಂದಿನ ಮಾತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರೇ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.
ಸಿಎಂ ಅಧಿಕಾರ ತಲಾ ಎರಡೂವರೆ ವರ್ಷ ಹಂಚಿಕೆಯಾಗಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಮೀರ್, ಇದು ಗೊತ್ತಿಲ್ಲ. ನಿಮಗೆ ಯಾರು ಹೇಳಿದ್ದು?. ಇದೆಲ್ಲ ಮಾಧ್ಯಮದವರ ಸೃಷ್ಟಿ. ಇದೇ ವಿಚಾರ ಕುರಿತು ಡಿ.ಕೆ.ಸುರೇಶ್ ಸಹ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಹೇಳಿದ್ದಾರಲ್ಲ ಎಂದರು.




